ಸಾಹಿತಿ ಗೌರೀಶ್ ಕಾಯ್ಕಿಣಿಯ ಸಮಗ್ರ ಬರಹ ಡಿಜಿಟಲೀಕರಣ

Update: 2021-04-11 12:10 GMT

ಬೆಂಗಳೂರು, ಎ.11: ಸಂಚಯ ಸಂಸ್ಥೆ ಹಾಗೂ ಸಂಚಿ ಫೌಂಡೇಶನ್ ವತಿಯಿಂದ ಹಿರಿಯ ಸಾಹಿತಿ ಗೌರೀಶ್ ಕಾಯ್ಕಿಣಿ ಅವರ ಸಮಗ್ರ ಬರಹಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ವಿವಿಧ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವ ಗೌರೀಶ್ ಕಾಯ್ಕಿಣಿ ಅವರ ಎಲ್ಲ ಪುಸ್ತಕಗಳು ಸಂಚಯ ಡಾಟ್‍ಒಆರ್‍ಜಿಯಲ್ಲಿ ಕನ್ನಡಾಸಕ್ತ ಓದುಗರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುತ್ತಿದೆ.

ಗೌರೀಶ್ ಕಾಯ್ಕಿಣಿಯವರ ಕಾವ್ಯಗಳಾದ ಶಾಂಡಿಲ್ಯ ಪ್ರೇಮಸುಧಾ, ಗಂಡು ಹೆಣ್ಣು ಹಾಗೂ ಪ್ರೀತಿ, ನಾಟಕಗಳಾದ ಒಲವಿನ ಒಗಟು, ಕ್ರೌಂಚದ್ವನಿ, ವಿಶ್ವದ ಆಖ್ಯಾಯಿಕೆಗಳು(ಕಥಾ ಸಂಕಲನ), ದೇವತಾತ್ಮ(ಪ್ರವಾಸ ಸಾಹಿತ್ಯ), ವ್ಯಕ್ತಿ ಚಿತ್ರಣಗಳಾದ ಪಶ್ಚಿಮದ ಪ್ರತಿಭೆ ಭಾಗ-1, 2, ಸತ್ಯಾರ್ಥಿ, ಭಾರತೀಯ ವಿಜ್ಞಾನಿಗಳು ಭಾಗ-1, 2, ಕೇಶಸುತ, ಗೀಕ ದಾರ್ಶನಿಕರು, ಥಾಮಸ್ ಎಡಿಸನ್.

ವೈಚಾರಿಕ ಕೃತಿಗಳಾದ ಮನೋವಿಜ್ಞಾನದ ರೂಪರೇಖೆಗಳು, ಮಾರ್ಕ್ಸ್ ವಾದ, ಬಾಳಿನ ಗುಟ್ಟು, ವಿಚಾರವಾದ, ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ, ಸಂಪ್ರದಾಯ ಮತ್ತು ಸಣ್ಣಕುಟುಂಬ, ಕಟಾಕ್ಷ, ನವಮಾನವತಾವಾದ, ನಾಸ್ತಿಕರು ಮತ್ತು ದೇವರು, ಆರ್ಕೆಸ್ಟ್ರಾ ಮತ್ತು ತಂಬೂರಿ, ಲೋಕಾಯತ. ಹಾಗೂ ಅನುವಾದ ಕೃತಿಗಳಾದ ಭಾರತೀಯ ತತ್ವಜ್ಞಾನದ ಇತಿಹಾಸ, ಪಂಜಾಬಿ ಕತೆಗಳು, ಬಿಳಿಯ ಕೊಕ್ಕರೆ, ಮಣ್ಣಿನ ಮನುಷ್ಯ, ಮಲೆನಾಡಿಗರು, ಬರ್ಲಿನ್ ಬಂದಿತು ಗಂಗೆಯ ಕಡಿಗೆ ಸೇರಿದಂತೆ ಗೌರೀಶ್ ಕಾಯ್ಕಿಣಿಯವರ ಎಲ್ಲ ಬರಹಗಳನ್ನು ಅಂತರ್ಜಾಲದಲ್ಲಿ ಓದಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News