ಶಿವಮೊಗ್ಗ: ಮುಷ್ಕರದ ನಡುವೆ 50 ಬಸ್ ಗಳ ಸಂಚಾರ, 100 ಸಿಬ್ಬಂದಿ ಕೆಲಸಕ್ಕೆ ಹಾಜರು

Update: 2021-04-11 17:45 GMT

ಶಿವಮೊಗ್ಗ, ಎ.11: ಕೆಎಸ್ಆರ್ಟಿಸಿ ನೌಕರರ ಮುಷ್ಕರ ಐದನೇ ದಿನವೂ ಮುಂದುವರಿದಿದೆ. ಈ ನಡುವೆ ಶಿವಮೊಗ್ಗ ಕೇಂದ್ರ ಬಸ್ ನಿಲ್ದಾಣದಿಂದ ರವಿವಾರ 50 ಬಸ್ ಗಳು ಸಂಚರಿಸಿವೆ.

ಒಟ್ಟು 100 ಸಿಬ್ಬಂದಿ ಹಾಜರಾಗಿದ್ದು, ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಮಾರ್ಗದಲ್ಲಿ ಐದು, ಮೈಸೂರು 1, ದಾವಣಗೆರೆ, ದುರ್ಗ, ಭದ್ರಾವತಿ, ಕಡೂರು, ಅರಸೀಕೆರೆ ಮಾರ್ಗದಲ್ಲಿ ಬಸ್ ಸಂಚರಿಸಿವೆ.

ರವಿವಾರ ಕೂಡ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳನ್ನು ನಿಲುಗಡೆ ಮಾಡಲಾಗಿತ್ತು. ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಬಸ್ ಗಳನ್ನು ನಿಲ್ಲಿಸಲಾಗಿತ್ತು. ರವಿವಾರವಾದ್ದರಿಂದ ಕಾಲೇಜುಗಳಿಗೆ ಹೋಗಬೇಕಾದ ಹಾಗೂ ಕಚೇರಿಗೆ ಹೋಗಬೇಕಾದವರು ಇಲ್ಲದ ಕಾರಣದಿಂದ ಸಂಖ್ಯೆ ಎಂದಿಗಿಂತ ಭಾರೀ ಕಡಿಮೆ ಇತ್ತು. ಬೆಂಗಳೂರು ಮತ್ತಿತರ ಕಡೆ ಹೋಗಬೇಕಾದವರನ್ನು ಖಾಸಗಿ ಮತ್ತು ಸರಕಾರಿ ಬಸ್ ಗಳು ಕರೆದುಕೊಂಡು ಹೋದವು.

ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ನೌಕರರ ಮುಖಂಡರನ್ನು ವರ್ಗಾವಣೆ ಮಾಡಿದ್ದಕ್ಕೆ ಇಲಾಖೆಯ ವಿರುದ್ಧ ಸಹಜವಾಗಿಯೇ ನೌಕರರಲ್ಲಿ ಸಿಟ್ಟಿದೆ. ಅದನ್ನು ವಿರೋಧಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ತಟ್ಟೆ, ಲೋಟ ಬಾರಿಸುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News