ಕರಾವಳಿ ಹೊರತುಪಡಿಸಿ ರಾಜ್ಯಾದ್ಯಂತ ಬುಧವಾರ ರಮಝಾನ್ ಉಪವಾಸ ಆರಂಭ

Update: 2021-04-12 14:50 GMT

ಬೆಂಗಳೂರು, ಎ.12: ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಎ.14ರಿಂದ ಪವಿತ್ರ ರಮಝಾನ್ ತಿಂಗಳ ಉಪವಾಸ ಆರಂಭಗೊಳ್ಳಲಿವೆ ಎಂದು ರಾಜ್ಯ ಚಂದ್ರದರ್ಶನ ಸಮಿತಿಯ ಸದಸ್ಯ ಮೌಲಾನ ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.

ಸೋಮವಾರ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ರಾಜ್ಯ ಚಂದ್ರದರ್ಶನ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಿಲ್ಲಿ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್ ಸೇರಿದಂತೆ ನಮ್ಮ ರಾಜ್ಯದ ಯಾವುದೇ ಭಾಗದಲ್ಲಿಯೂ ಚಂದ್ರ ದರ್ಶನವಾಗಿರುವ ಮಾಹಿತಿ ಲಭ್ಯವಾಗದೆ ಇರುವ ಹಿನ್ನೆಲೆಯಲ್ಲಿ ಸಮಿತಿಯು ಎ.14ರಂದು ರಮಝಾನ್ ಮಾಸದ ಮೊದಲ ಉಪವಾಸ ಆಚರಿಸಲು ತೀರ್ಮಾನ ಕೈಗೊಂಡಿದೆ. ಎ.13ರಿಂದ ತರಾವೀಹ್ ನಮಾಝ್ ನಿರ್ವಹಿಸಲಾಗುವುದು ಎಂದು ಅವರು ಹೇಳಿದರು.

ಕರಾವಳಿಯಲ್ಲಿ ಮಂಗಳವಾರದಿಂದ ರಮಝಾನ್

ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಸೋಮವಾರ ಕ್ಯಾಲಿಕಟ್ ನಲ್ಲಿ ಆಗಿರುವುದರಿಂದ ಕರಾವಳಿಯಲ್ಲಿ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗುವುದಾಗಿ ಖಾಝಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News