ರಮಝಾನ್: ಅಲ್ಪಸಂಖ್ಯಾತರ ವಸತಿ ಶಾಲೆ, ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲ

Update: 2021-04-12 16:38 GMT

ಬೆಂಗಳೂರು, ಎ.12: ಪವಿತ್ರ ರಮಝಾನ್ ತಿಂಗಳು ಇದೇ ತಿಂಗಳ 13ರಿಂದ ಆರಂಭವಾಗಲಿದ್ದು, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆ, ಕಾಲೇಜುಗಳಲ್ಲಿ ಸುಮಾರು ಶೇ.75ರಷ್ಟು ಮುಸ್ಲಿಮ್ ವಿದ್ಯಾರ್ಥಿಗಳಿರುತ್ತಾರೆ. ರಮಝಾನ್ ತಿಂಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಉಪವಾಸವಿರುವುದರಿಂದ ಅಂತಹ ವಿದ್ಯಾರ್ಥಿಗಳಿಗೆ ಬೆಳಗ್ಗೆ 4 ಗಂಟೆಯ ಒಳಗೆ ಊಟ(ಸಹರ್), ಉಪವಾಸ ಬಿಡುವ ವೇಳೆ ಸಂಜೆ 7 ಗಂಟೆಗೆ ತಿಂಡಿ(ಇಫ್ತಾರ್) ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿ ಕೊಡಲು ಸೂಚಿಸಿದೆ. ಈ ಸುತ್ತೋಲೆಯು ರಮಝಾನ್ ಮಾಸ ಪ್ರಾರಂಭ ದಿನದಿಂದ ಮುಕ್ತಾಯವಾಗುವ ದಿನಾಂಕದವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News