ರಮಝಾನ್‌ ಆಚರಣೆಗೆ ರಾಜ್ಯ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ

Update: 2021-04-13 11:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.13- ಕೋವಿಡ್ ಎರಡನೇ ಅಲೆ ಕಾರಣದಿಂದಾಗಿ ರಾಜ್ಯ ಸರಕಾರ ರಮಝಾನ್ ಉಪವಾಸ ಆಚರಣೆ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ತಿಳಿಸಲಾಗಿದೆ. ನಮಾಝ್‌ ಹೊರತುಪಡಿಸಿ, ಇತರ ಕೆಲ ಆರಾಧನಾ ಕರ್ಮಗಳನ್ನು ಸಾಮೂಹಿಕವಾಗಿ ನೆರವೇರಿಸುವುದನ್ನು ನಿರ್ಬಂಧಿಸಲಾಗಿದೆ.

ಅದೇ ರೀತಿ, ರಮಝಾನ್ ಉಪವಾಸ ವ್ರತಾಚರಣೆ ಇಂದಿನಿಂದ ಆರಂಭವಾಗಿದ್ದು, ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿಯ ಬಾಗಿಲು ತೆರೆಯಬೇಕು. ಕಂಟೈನ್ಮೆಂಟ್ ಝೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ಹೇಳಲಾಗಿದೆ.

ಸರ್ಕಾರ ಸೂಚಿಸಿದ ಮಾರ್ಗಸೂಚಿಗಳು:

►ಕಂಟೈನ್ಮೆಂಟ್‌ ಝೋನ್‌ ಗಳಲ್ಲಿರುವ ಮಸೀದಿಗಳನ್ನು ಮುಚ್ಚಲಾಗುವುದು
►60 ವರ್ಷ ಮೇಲ್ಪಟ್ಟವರು, ಅನಾರೋಗ್ಯದಿಂದಿರುವವರು, ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಮನೆಯಲ್ಲೇ ಇರುವುದು
►ನಮಾಝ್‌ ಗೆ ನಿಲ್ಲುವ ಸಾಲುಗಳ ಮಧ್ಯೆ 6 ಅಡಿ‌ ಅಂತರ ಪಾಲಿಸುವುದು
►ಅವಶ್ಯಕತೆಯಿದ್ದರೆ ಎರಡು ಇಮಾಮ್‌ ಜಮಾಅತ್‌ ನಡೆಸುವುದು
►ಮಸೀದಿಯು ಭರ್ತಿಯಾಗಿದ್ದರೆ ಎರಡನೇ ಹಂತದ ಜಮಾಅತ್‌ ವರೆಗೆ ಮಸೀದಿಯ ಹೊರಗಡೆ ಕಾಯುವುದು (ಸುರಕ್ಷಿತ ಅಂತರ ಪಾಲನೆಯೊಂದಿಗೆ)
►ಗ್ರಂಥಾಲಯ, ಮದ್ರಸಾ ಮತ್ತು ಧಾರ್ಮಿಕ ತರಗತಿಗಳನ್ನು ಮಸೀದಿಯೊಳಗೆ ನಡೆಸಬಾರದು.
►ಸಾಮೂಹಿಕವಾಗಿ ಧಾರ್ಮಿಕ ಗ್ರಂಥ ಪಠಣ ಮತ್ತು ಮಸೀದಿಯೊಳಗೆ ಸಾಮೂಹಿಕ ಚರ್ಚೆ ನಡೆಸಬಾರದು
►ಮನೆಯಲ್ಲೇ ಉಪವಾಸ ಮುರಿದು ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರುವುದು, ಯಾವುದೇ ಕಾರಣಕ್ಕೂ ಮಸೀದಿಗೆ ಅಹಾರವನ್ನು ತರಬಾರದು
►ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ತರಾವೀಹ್‌ ನಮಾಝ್‌ ನಡೆಸಬೇಕು. ಅಗತ್ಯವಿದ್ದರೆ ಎರಡು ಜಮಾಅತ್‌ ನಡೆಸುವುದು
►ಸಾಮಾನ್ಯವಾಗಿ ಉಪಯೋಗಿಸುವ ಟವೆಲ್‌, ಟೋಪಿಗಳನ್ನು ಮಸೀದಿಯೊಳಗೆ ಬಳಸಬಾರದು
►ನಮಾಝ್‌ ಗೆ ಬಂದವರು ಪರಸ್ಪರ ಹಸ್ತಲಾಘವ ಅಥವಾ ಅಪ್ಪಿಕೊಳ್ಳಬಾರದು.
►ತರಾವೀಹ್‌ ನಮಾಝ್‌ ಗೆ ಮನೆಯಲ್ಲೇ ವುಝೂ(ಅಂಗಸ್ನಾನ) ನಿರ್ವಹಿಸಿ ಮಸೀದಿಗೆ ಬರಬೇಕು
►ಸುನ್ನತ್‌ ನಮಾಝ್‌ ಮನೆಯಲ್ಲೇ ನಿರ್ವಹಿಸುವುದು
►ನಮಾಝ್‌ ಗೆ ಬೇಕಾಗುವ ಮುಸಲ್ಲಾ (ಕಾರ್ಪೆಟ್)‌ ತರುವುದು
►ಮಾಸ್ಕ್‌ ಧರಿಸುವುದು ಕಡ್ಡಾಯ
►ಜನದಟ್ಟನೆಯನ್ನು ನಿಯಂತ್ರಿಸುವುದು
►ಸೀನುವಾಗ ಸಮರ್ಪಕ ಕರವಸ್ತ್ರಗಳನ್ನು ಬಳಸುವುದು
►ಮಸೀದಿಗೆ ಪ್ರವೇಶಿಸುವಾಗ ಥರ್ಮಲ್‌ ಸ್ಕ್ಯಾನರ್‌ ಮೂಲಕ ಸ್ಕ್ಯಾನ್‌ ಮಾಡುವುದು. ಶೀತ, ಕಫ, ಗಂಟಲು ನೋವು ಮತ್ತು ಉಸಿರಾಟ ತೊಂದರೆಗಳು ಕಂಡು ಬಂದರೆ ಮಸೀದಿಗೆ ಪ್ರವೇಶಿಸಲು ಅನುಮತಿ ನೀಡದಿರುವುದು
►ಕೊರೋನ ಜಾಗೃತಿ ಮೂಡಿಸುವ ಪೋಸ್ಟರ್‌ ಗಳನ್ನು ಪ್ರದರ್ಶಿಸಬೇಕು. ಆಡಿಯೋ ಮತ್ತು ವೀಡಿಯೋ ಕ್ಲಿಪ್‌ ಗಳನ್ನು ಪ್ರಸಾರ ಮಾಡಬೇಕು.
►ಕೈ ತೊಳೆಯಲು ಸೋಪ್‌ ಮತ್ತು ದ್ರಾವಕಗಳ ವ್ಯವಸ್ಥೆ ಮಾಡುವುದು
►ಎರಡು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡುವುದು
►ಆರೋಗ್ಯ ಸೇತು ಅಪ್ಲಿಕೇಶನ್‌ ಬಳಸುವುದು ಉತ್ತಮ
►ನಮಾಝ್‌ ಮುಗಿದ ಬಳಿಕ ಸೋಂಕು ನಿವಾರಕ ದ್ರಾವಕಗಳನ್ನು ಸಿಂಪಡಿಸುವುದು
►ಎಲ್ಲಾ ನಮಾಝ್‌ ಗಳನ್ನು ಸರಿಯಾದ ಸಮಯಕ್ಕೆ ಮುಗಿಸುವುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News