×
Ad

ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರು

Update: 2021-04-13 20:10 IST

ಬೆಂಗಳೂರು, ಎ.13: ಮದುವೆಯಾದರೂ ತನ್ನೊಂದಿಗೆ ಸಂಸಾರ ನಡೆಸುತ್ತಿಲ್ಲ ಎಂದು ಆರೋಪಿಸಿ ಬಿಗ್ ಬಾಸ್-7 ಸೀಸನ್ ಸ್ಪರ್ಧಿಯಾಗಿದ್ದ ಚೈತ್ರಾ ಕೊಟೂರು ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪತಿ ನಾಗಾರ್ಜುನ್ ವಿರುದ್ಧ ಪತ್ನಿ ದೂರು ನೀಡಿದ ಮೇರೆಗೆ ಬಸವನಗುಡಿ ಮಹಿಳಾ ಪೊಲೀಸರು ಗಂಭೀರ ಸ್ವರೂಪವಲ್ಲದ ಅಪರಾಧ (ಎನ್​ಸಿಆರ್) ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮದುವೆಯಾಗಿ ವಂಚನೆ ಮಾಡಿರುವ ನಾಗಾರ್ಜುನ್ ತನ್ನ ಜೊತೆ ಸಂಸಾರ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.‌ ಈ ಬಗ್ಗೆ ಅವರನ್ನ ಕರೆಸಿ ಬುದ್ಧಿವಾದ ಹೇಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News