ರಾಜ್ಯದಲ್ಲಿ ಕೋವಿಡ್ ಗೆ ಇಂದು 67 ಮಂದಿ ಬಲಿ: 13 ಸಾವಿರ ದಾಟಿದ ಒಟ್ಟು ಸಾವಿನ ಸಂಖ್ಯೆ

Update: 2021-04-13 15:32 GMT

ಬೆಂಗಳೂರು, ಎ.13: ರಾಜ್ಯದಲ್ಲಿ ಮಂಗಳವಾರ 67 ಮಂದಿ ಸೋಂಕಿತರು ಮೃತಪಟ್ಟಿದ್ದು, 8,778 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,83,647ಕ್ಕೆ ಏರಿಕೆಯಾಗಿದೆ. ಆ ಪೈಕಿ 13,008 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಇಂದು 6,079 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 9,92,003ಕ್ಕೆ ತಲುಪಿದೆ. ರಾಜ್ಯದಲ್ಲಿ ಈಗ 78,617 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 5,500 ಪ್ರಕರಣಗಳು ಪತ್ತೆಯಾಗಿದ್ದು, ಮೈಸೂರು 492, ತುಮಕೂರು 350, ಕಲಬುರಗಿ 290, ಬೀದರ್‌ 198, ಬಳ್ಳಾರಿ 168, ಹಾಸನ 150, ದಕ್ಷಿಣ ಕನ್ನಡ 142, ಧಾರವಾಡ 132, ಚಿಕ್ಕಬಳ್ಳಾಪುರ 114, ಮಂಡ್ಯ 114, ವಿಜಯಪುರ ಜಿಲ್ಲೆಯಲ್ಲಿ 105 ಹೊಸ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News