ಧರಣಿ ಸ್ಥಳದಲ್ಲೇ ಯುಗಾದಿ ಹಬ್ಬ ಆಚರಿಸಿದ ನಿವೇಶನರಹಿತರು

Update: 2021-04-14 13:11 GMT

ಮಂಡ್ಯ: ಕಳೆದ 24 ದಿನಗಳಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನರಹಿತರು ಯುಗಾದಿ ಹಬ್ಬವನ್ನು ಧರಣಿ ಸ್ಥಳದಲ್ಲಿ ಅಚರಿಸಿದರು.

ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯ ಕುಟುಂಬಗಳ ಸದಸ್ಯರು ಮಂಗಳವಾರ ಬೆಳಗ್ಗಿನಿಂದ ಮಾವು-ಬೇವಿನ ತೋರಣ ಕಟ್ಟಿ, ರಂಗೋಲಿ‌ ಬಿಡಿಸಿ ರಂಗು ಮೂಡಿಸಿದರು.

ಮಧ್ಯಾಹ್ನ ಒಬ್ಬಟ್ಟು, ಪಾಯಸ, ಪಲ್ಯ, ಚಿತ್ರಾನ್ನ ಸೇರಿದಂತೆ ಹಲವು ಭಕ್ಷ್ಯಗಳನ್ನು ತಯಾರಿಸಿ ಪಂಕ್ತಿ ಭೋಜನ ಮಾಡಿದರು‌.

ಬುಧವಾರ ಮಧ್ಯಾಹ್ನ ನಾಟಿ ಕೋಳಿ ಸಾರು, ಮೊಟ್ಟೆ, ಮುದ್ದೆ, ಅನ್ನ ಸಿದ್ದಪಡಿಸಿ ಹಬ್ಬದ ಮಾರನೇ ದಿನದ ವರ್ಷದ ತೊಡಕು ಅಚರಿಸಿದರು.

ಇದೇ ಸಂದರ್ಭದಲ್ಲಿ ಗಾಯಕಿ ಮಂಜುಳಾ, ವೈರಮುಡಿ, ಟಿ.ಡಿ.ನಾಗರಾಜು, ಶೇಖರ್, ವೈರಮುಡಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಆರ್ಗಾನಿಕ್ ಮಂಡ್ಯದ ಎಸ್.ಸಿ.ಮಧುಚಂದನ್, ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿಯ ಎಂ.ಬಿ.ನಾಗಣ್ಣಗೌಡ, ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್, ವಕೀಲರಾದ ಗಂಗಾವತಿ, ಲಕ್ಷ್ಮಣ್ ಚೀರನಹಳ್ಳಿ, ಹೋರಾಟಗಾರ ಷಣ್ಮುಖೇಗೌಡ,  ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ, ನಿವೃತ್ತ ಪ್ರಾಧ್ಯಾಪಕ ತೂಬಿನಕೆರೆ ಲಿಂಗರಾಜು, ಸಾಹಿತಿ ಶಂಕರಪ್ಪ ಗೌಡ, ಮಂಗಲ ಶಿವಣ್ಣ ಮತ್ತಿತ್ತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News