ರಾಜ್ಯಾದ್ಯಂತ 11,265 ಕೊರೋನ ಪ್ರಕರಣ ದೃಢ: 38 ಸಾವು

Update: 2021-04-14 15:00 GMT

ಬೆಂಗಳೂರು, ಎ.14: ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ಬುಧವಾರ 11,265 ಹೊಸ ಕೊರೋನ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ. ಹಾಗೂ 38 ಮಂದಿ ಸಾವನ್ನಪ್ಪಿದ್ದಾರೆ. 4,364 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್ ಸಾವಿನ ಪ್ರಕರಣಗಳು: ಬೆಂಗಳೂರು ನಗರ ಒಂದರಲ್ಲಿಯೇ ಕಳೆದ 24 ಗಂಟೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬಳ್ಳಾರಿ-1, ಬೀದರ್-2, ಧಾರವಾಡ-3, ಮೈಸೂರು-5, ತುಮಕೂರು-1 ಸಾವಿನ ಪ್ರಕರಣಗಳು ವರದಿಯಾಗಿದೆ.

ರಾಜ್ಯಾದ್ಯಂತ ಇಲ್ಲಿಯವರೆಗೂ ಒಟ್ಟು 10,94,912 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 13,046 ಮಂದಿ ಸಾವನ್ನಪ್ಪಿದ್ದಾರೆ. ಇವತ್ತು ಸೇರಿದಂತೆ ರಾಜ್ಯದಲ್ಲಿ 85,480 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೇರ್‍ಸೆಂಟರ್ ಹಾಗೂ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಸೋಂಕಿತರ ವಿವರ: ಬಾಗಲಕೋಟೆ-68, ಬಳ್ಳಾರಿ-159, ಬೆಳಗಾವಿ-107, ಬೆಂಗಳೂರು ಗ್ರಾಮಾಂತರ-48, ಬೆಂಗಳೂರು ನಗರ-8,155, ಬೀದರ್-290, ಚಾಮರಾಜನಗರ-72, ಚಿಕ್ಕಬಳ್ಳಾಪುರ-44, ಚಿಕ್ಕಮಗಳೂರು-42, ಚಿತ್ರದುರ್ಗ-17, ದಕ್ಷಿಣ ಕನ್ನಡ-140, ದಾವಣಗೆರೆ-34, ಧಾರವಾಡ-127, ಗದಗ-25, ಹಾಸನ-132, ಹಾವೇರಿ-44, ಕಲಬುರಗಿ-376, ಕೊಡಗು-23, ಕೋಲಾರ-116, ಮಂಡ್ಯ-85, ಮೈಸೂರು-356, ರಾಯಚೂರು-65, ರಾಮನಗರ-35, ಶಿವಮೊಗ್ಗ-92, ತುಮಕೂರು-245, ಉಡುಪಿ-110, ಉತ್ತರ ಕನ್ನಡ-41, ವಿಜಯಪುರ-122, ಯಾದಗಿರಿ-58 ಸೋಂಕಿತ ಪ್ರಕರಣ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News