ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಚಿಕಿತ್ಸೆಗೆ ದರ ನಿಗದಿ ಮಾಡಿದ ಸರಕಾರ

Update: 2021-04-15 12:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.15: ಕೊರೋನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ದರ ನಿಗದಿ ಮಾಡಿದ್ದು, ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಸರಕಾರ ಮರು ಅನುಷ್ಠಾನ ಮಾಡಿದೆ.

ಜನರಲ್ ವಾರ್ಡಿಗೆ 5,200 ರೂ., ಆಮ್ಲಜನಕ ವ್ಯವಸ್ಥೆ ಇರುವ ವಾರ್ಡ್ ಗೆ ಪ್ರತಿನಿತ್ಯ 7 ಸಾವಿರ ರೂ. ನಿಗದಿ ಮಾಡಿದೆ. ತೀವ್ರ ನಿಗಾ ಘಟಕದ ವಾರ್ಡ್ ಗೆ 8,500 ರೂ. ಮತ್ತು ಐಸಿಯು ಜತೆಗೆ ವೆಂಟಿಲೆಟರ್ ಇರುವ ವಾರ್ಡ್ ಗೆ 10 ಸಾವಿರ ರೂ. ನಿಗದಿ ಮಾಡಲಾಗಿದೆ.

ನಗದು ಮತ್ತು ವಿಮಾ ಯೋಜನೆ ಹೊಂದಿರುವವರಿಗೆ ಜನರಲ್ ವಾರ್ಡ್ ಗೆ 10 ಸಾವಿರ ರೂ., ಆಮ್ಲಜನಕ ವ್ಯವಸ್ಥೆಯ ವಾರ್ಡ್ ಗಳಿಗೆ 12 ಸಾವಿರ, ಐಸಿಯು ವಾರ್ಡ್ ಗಳಿಗೆ 15 ಸಾವಿರ ರೂ. ಐಸಿಯು ಮತ್ತು ವೆಂಟಿಲೆಟರ್ ವ್ಯವಸ್ಥೆ ಇರುವ ವಾರ್ಡ್ ಗೆ 25 ಸಾವಿರ ರೂ.ನಿಗದಿ ಮಾಡಲಾಗಿದೆ. ಈ ಹಿಂದೆ ಶೇ. 50 ರಷ್ಟು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಮೀಸಲಿಡಬೇಕೆಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News