''ದಯವಿಟ್ಟು ಸುಳ್ಳುಗಳನ್ನು ನಿಲ್ಲಿಸಿ, ಅಂಬೇಡ್ಕರ್ ಹೆಸರು ಹೇಳುವುದಕ್ಕೂ ನೀನು ನಾಲಾಯಕ್''

Update: 2021-04-17 12:44 GMT

ಬೆಂಗಳೂರು, ಎ.16: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಧಾರ್ಮಿಕ ವಿಚಾರಗಳ ಬಗ್ಗೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಫೇಸ್ಬುಕ್ ನಲ್ಲಿ 'ಯುವ ಲೈವ್' ಕಾರ್ಯಕ್ರಮ ಮಾಡಿದ್ದು, ಅಂಬೇಡ್ಕರ್ ಯಾಕೆ ಇಸ್ಲಾಂ ಹಾಗೂ ಕ್ರಿಸ್ಚಿಯನ್ ಧರ್ಮ ಸ್ವೀಕರಿಸಲಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಆದರೆ ಚಕ್ರವರ್ತಿ ಸೂಲಿಬೆಲೆ ಇಸ್ಲಾಂ ಹಾಗೂ ಕ್ರಿಸ್ಚಿಯನ್ ಧರ್ಮಗಳ ಬಗ್ಗೆ ಹಾಗೂ ಅಂಬೇಡ್ಕರ್ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ನೆಟ್ಟಿಗರು ಅವರ ವಿರುದ್ಧ ಗರಂ ಆಗಿದ್ದಾರೆ.

'ಅಂಬೇಡ್ಕರ್ ಮತ್ತು ಅವರ ದಲಿತ ಮಿತ್ರರು ಇಸ್ಲಾಮನ್ನು ಸ್ವೀಕರಿಸಲು ಹೈದರಾಬಾದಿನ ನಿಜಾಮ 75 ಮಿಲಿಯನ್ ರೂ. ಆಫರ್ ಮಾಡಿದ್ದ. ಕ್ರಿಸ್ಚಿಯನ್ನರು ಅಂಬೇಡ್ಕರ್ ನ್ನು ಮತಾಂತರ ಮಾಡಲು ಕಾತರದಿಂದ ಕಾಯುತ್ತಿದ್ದರು. ಆದರೆ ಅಂಬೇಡ್ಕರ್ ನಿರ್ಧಾರ ಮಾತ್ರ ಸ್ಪಷ್ಟವಾಗಿತ್ತು. ವ್ಯಕ್ತಿಯೊಬ್ಬ ಕ್ರಿಸ್ಚಿಯನ್ ಆಗಿ ಮತಾಂತರಗೊಂಡರೆ ಆತ ಭಾರತೀಯನಾಗಿರಲು ಸಾಧ್ಯವಿಲ್ಲ. ಇಸ್ಲಾಮಿನ ಭ್ರಾತೃತ್ವ ಮುಸ್ಲಿಮರಿಗೆ ಮಾತ್ರ ಸೀಮಿತ. ವಿಶ್ವ ಭ್ರಾತೃತ್ವಕ್ಕೆ ಪ್ರೋತ್ಸಾಹ ಅವರಿಂದ ಸಾಧ್ಯವಿಲ್ಲ ಎಂದು ಸೂಲಿಬೆಲೆ ಹೇಳಿದ್ದಾರೆ.

ಈ ದೇಶದ ಪ್ರಾಚೀನ ಸಂಸ್ಕೃತಿಗೆ ಅಪಾಯಕಾರಿಯಾದ ಮತವನ್ನು ನಾನು ಸ್ವೀಕರಿಸಲಾರೆ. ಯಾಕೆಂದರೆ ಈ ದೇಶದ ಇತಿಹಾಸಲ್ಲಿ ಓರ್ವ ವಿದ್ವಂಸಕ ಎಂದು ಉಲ್ಲೇಖಿಸುವುದನ್ನು ನಾನು ಒಪ್ಪುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ. ಅವರ ಈ 'ಯುವ ಲೈವ್'ಗೆ ಸುಮಾರು 1100 ಮಂದಿ ಲೈಕ್ ಮಾಡಿದ್ದು, ಸುಮಾರು 600ರಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಬಹುತೇಕ ಎಲ್ಲಾ ಕಮೆಂಟ್ ಗಳು ಅವರ ವಿರುದ್ಧವಾಗಿಯೇ ಬಂದಿದ್ದು, ಕೆಲವರು ಸಮರ್ಥಿಸಿ ಕಮೆಂಟ್ ಮಾಡಿದ್ದಾರೆ.

''ಕೋಟಿ ಪಡೆದು ನಿನ್ನ ಹಾಗೇ ಎಲ್ಲಾ ದೇಶದಲ್ಲಿ ಎಲ್ಲಾ ಗ್ರಹಗಳಲ್ಲೂ ನಿನ್ನ ಕಸಿನ್ ಸಿಸ್ಟರ್ ಗಳನ್ನು ಅಡ ಇಡುವ ಮನುಷ್ಯ ಅಲ್ಲ ನಮ್ಮ ದೇವರು ಬಾಬಾ ಸಾಹೇಬ್ ಅಂಬೇಡ್ಕರ್. ಅವರ ಹೆಸರು ಹೇಳುವುದಕ್ಕೂ ನಾಲಾಯಕ್ ನೀನು. ಏನಿದ್ದರೂ ಸುವರಕರ್ ಗೋಡ್ಸೆ ಬಗ್ಗೆ ಮಾತ್ರ ಮಾತಾಡಬೇಕು ನೀನು. ಯಾಕೆಂದರೆ ಅವರು ಕೂಡ ನಿನ್ನ ಹಾಗೇ ಬೂಟು ನೆಕ್ಕುವ ಪ್ರಾಣಿಗಳು ಅಲ್ಲವೇ' ಎಂದು ಶ್ರೀಮೌರ್ಯ ಎಂಬವರು  ವ್ಯಂಗ್ಯವಾಡಿದ್ದಾರೆ

ಇಲ್ಲಿ ಯಾರು ನಿಮ್ಮ ಪುಂಗುವಿಕೆ ಕೇಳ್ತಾ ಇಲ್ಲ ಸರ್. ಭೀಮರಾವ್ ಅಂಬೇಡ್ಕರ್ ಸಾಹೇಬರು ಇಸ್ಲಾಂ ಧರ್ಮವನ್ನು ಯಾಕೆ ಧಿಕ್ಕರಿಸಿದರು ಎನ್ನುವುದನ್ನು ಬಿಟ್ಟು, ನಮ್ಮ ಹಿಂದೂ ಧರ್ಮದಲ್ಲಿ ಹುಟ್ಟಿದ ಭೀಮರಾವ್ ಅವರು 'ಹಿಂದು ವಾಗಿ ಹುಟ್ಟಿದ್ದೀನಿ ಆದರೆ ಹಿಂದುವಾಗಿ ಸಾಯಲಾರೆ' ಎಂದು ಹಿಂದು ಧರ್ಮವನ್ನು ತ್ಯಜಿಸಿದರು. ಇನ್ನೂ ಕೋಟಿ ಕೋಟಿ ಹಣ ಎನ್ನುವುದನ್ನ ನಿಲ್ಲಿಸಿ ಪ್ರಸ್ತುತ ಕಾಲದಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳ ಬಗ್ಗೆ ಮಾತಾಡಿ, ಇಲ್ಲವಾದರೆ ದಯವಿಟ್ಟು ನಿಮ್ಮ ಸುಳ್ಳುಗಳನ್ನು ನಿಲ್ಲಿಸಿ ಸರ್. ಇನ್ನು ಮುಂದೆ ಮಾತನಾಡುವುದೇ ಆದರೆ ದಯವಿಟ್ಟು ಈ ನಿಮ್ಮ ಕೋಟಿ ಲೈವ್ ಭಾಷಣಕ್ಕೆ ಬಂದಿರುವ ಕಾಮೆಂಟ್ ಗಳನ್ನ ಒಮ್ಮೆ ಓದಿ. ಸಮಾಧಾನ ಆದರೆ ನಿಮ್ಮ ಭಾಷಣ ಮುಂದುವರಿಸಿ ಸರ್ ಎಂದು ನಿಂಗರಾಜ ನವಿಲೂರು ಎಂಬವರು ಮನವಿ ಮಾಡಿದ್ದಾರೆ.

ಇವನ ಯೋಗ್ಯತೆಗೆ ಅಂಬೇಡ್ಕರ್ ಸರ್ ಜಯಂತಿ ದಿನ ಒಂದ್ ಪೋಸ್ಟ್ ಹಾಕಿಲ್ಲ. ನೆಕ್ಸ್ಟ್ ಡೇ ಅಂಬೇಡ್ಕರರ ಕುರಿತಾದ ಹಳ್ಳಿ ಕಾರ್ಯಕ್ರಮವೊಂದಕ್ಕೆ ಹೋಗಿ ಒಂದೇ ಒಂದ್ ಲೈನ್ ಅಂಬೇಡ್ಕರರ ಬಗ್ಗೆ ಬರೆದಿಲ್ಲ. ಈಗ ಇವನ ಕಿತ್ತೋದ ಕಾರ್ಯಕ್ರಮಕ್ಕೆ ಅಂಬೇಡ್ಕರರು ಹಾಗೂ ಮುಸಲ್ಮಾನರನ್ನ ಟಾರ್ಗೆಟ್ ಮಾಡ್ಕೊಂಡಿದ್ದಾನೆ. ದೇಶ, ಸೈನಿಕರು, ದೇಶಭಕ್ತಿ ಎಂದು ತನ್ನ ಬೇಳೆ ಬೇಯಿಸಿಕೊಳ್ಳುವ ಇಂತಹ ಕಚಡಾಗಳನ್ನು ಸುಮ್ನೆ ಬಿಟ್ಕೊಂಡಿಡುವುದೇ ಅಸಹ್ಯ ಎಂದು ಪ್ರಮೋದ್ ಪ್ರಿನ್ಸ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಧರ್ಮ ಯಾಕೆ ಧಿಕ್ಕರಿಸಿ ಹೋದರು ? ಆ ಸತ್ಯ ಹೇಳಿ ಪುಂಗ್ಲಿ ಬಾಯ್. ಸತ್ಯ ಬಿಟ್ಟು ಬೇರೆಲ್ಲ ಪುಂಗುತ್ತೀರಿ ನೀವು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕುವ ನೀಚ ಬುದ್ದಿ ಬಿಡಿ. ಹೆಂಗ್ ಪುಂಗ್ ಲೀರವರೆ ಎಂದು ಮಹಾಂತೇಶ್ ಎನ್ ಬೇತೂರು ಎಂಬವರು ಕಮೆಂಟ್ ಮಾಡಿದ್ದಾರೆ.

ಅಂಬೇಡ್ಕರ್ ರವರ ಬಗ್ಗೆ ಅರಿವು ನಿನ್ನಂತ ಕೊಳೆತ ಮನಸ್ಸಿನ ವ್ಯಕ್ತಿಯಿಂದ ತಿಳಿದುಕೊಳ್ಳುವ ಅಗತ್ಯ ಇಲ್ಲ. ಬಾಬಾ ಸಾಹೇಬರ ವಿಚಾರ ಮಾತನಾಡಬೇಕಾದರೆ ಅದಕ್ಕೊಂದು ಘನತೆ, ಯೋಗ್ಯತೆ ಬೇಕು. ತಾಕತ್ ಇದ್ದರೆ ಮನುಸ್ಮೃತಿ ಯಾಕೆ ಸುಟ್ಟರು, ಹಿಂದೂ ಧರ್ಮ ಯಾಕೆ ಬಿಟ್ಟರು ಅನ್ನುವ ವಿಚಾರದ ಬಗ್ಗೆ ಸತ್ಯಾಸತ್ಯತೆ ತಿಳಿಸು. ಇಲ್ಲವಾದರೆ ಅಂಬೇಡ್ಕರ್ ಹೆಸರನ್ನು ನಿನ್ನ ಕೊಳೆತ ಬಾಯಲ್ಲಿ ಹೇಳಬೇಡ ಎಂದು ಭುತುರಾಜು ಕರಿರಾಮನಹಳ್ಳಿ ಎಂಬವರು ಮನವಿ ಮಾಡಿದ್ದಾರೆ.

ಅಂಬೇಡ್ಕರ್ 'ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ' ಅಂತ ಹೇಳಿ ಬೌದ್ಧ ಧರ್ಮಕ್ಕೆ ಸೇರಿದರು. ಅದೇಕೆ ಹಾಗೆ ಹೇಳಿದರು ಅಂತಾನೂ ಹೇಳು ಎಂದು ರೂಪೇಶ್ ಪರಂ ಎಂಬವರು ತಿಳಿಸಿದ್ದಾರೆ. 

ಇಷ್ಟೊಂದು ಮರ್ಯಾದೆ ಬಿಟ್ಟು ಯಾಕೆ ಬದುಕ್ತೀಯ ಮಾರಾಯ. ದುಡಿದು ತಿನ್ನು ಸಾಧ್ಯವಾದರೆ. ಅಂಬೇಡ್ಕರ್ ಅವರ ನಿಲುವನ್ನ ಚರ್ಚೆ ಮಾಡೋಕೆ‌ ನಿನ್ನ ಮನುವಾದಿ ಮೆದುಳಿಗೆ ಕಷ್ಟ ಎಂಬುದು ನಮಗೆ ಗೊತ್ತಿದೆ. ಅವರು ಮುಸ್ಲಿಮರಾಗಲಿಲ್ಲ ಅನ್ನೋದಕ್ಕಿಂತ ಬೌದ್ಧ ಧರ್ಮ ಬಿಟ್ಟು ಇನ್ಯಾವ ಧರ್ಮವನ್ನೂ ಸಹ ಪಡೆಯಲಿಲ್ಲ. ಆದರೆ ನಿನಗೆ ನೈತಿಕತೆ ಮರ್ಯಾದೆ, ನಾಚಿಕೆ, ಹೇಸಿಗೆ ಯಾವುದಾದರೂ ಇದ್ದರೆ ಅವರು ಯಾಕೆ ಹಿಂದೂ ಧರ್ಮವನ್ನ ತ್ಯಜಿಸಿದರು ? ಹಿಂದೂ ವಿಲ್‌ಕೋಡ್ ತಂದಾಗ ಅದರ (ಅವರ)ವಿರುದ್ಧ ದೇಶದೆಲ್ಲೆಡೆ ಗಲಾಟೆ ಮಾಡಿದವರು ಯಾರು? ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ, ಆದರೆ ಸಾಯಲಾರೆ ಎಂದದ್ದು ಏಕೆ ? ಈ ದೇಶದಿಂದ ಮುಸ್ಲಿಮರು ಹೊರಹೋಗಬಾರದು ಎಂದದ್ದು ಯಾಕಾಗಿ ? ಇದರ ಬಗ್ಗೆ ಚರ್ಚೆ ಮಾಡು ಎಂದು ಅರಸು ಮಂಜು ಎಂಬವರು ಕಮೆಂಟ್ ಮಾಡಿದ್ದಾರೆ.

ಅದೆಷ್ಟು ಸುಳ್ಳು ಹೇಳಿ ಸಮಾಜವನ್ನು ಒಡೆಯುತ್ತಿಯೋ ಪುಂಗಪ್ಪ? ಅಂಬೇಡ್ಕರ್ ಅವರಿಗೆ ಕೋಟಿ ರೂಪಾಯಿ ಕೊಡ್ತೀನಿ ಅಂದಿದ್ಯಾರು ನಿನ್ನ ಕಸಿನ್ ಸಿಸ್ಟರ್ರಾ..? ಮೂರ್ಖ. ನಿನ್ನ ಸುಳ್ಳಿನ ಚಟಕ್ಕೆ ಅಂಬೇಡ್ಕರ್ ಅವರ ಹೆಸರನ್ನು ಬಳಸಬೇಡ. ನಿನ್ನ ಮತ್ತು ನಿಮ್ಮವರ ಶೋಷಣೆ, ಕುತಂತ್ರದ ಅರಿವಿದೆ ನಮಗೆ ಎಂದು ಅಖಿಲ್ ಶಿವು ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ಕೋರೊನದಿಂದ ತತ್ತರಿಸಿದೆ. ದಿನಾ ಹೆಣ. ಆಸ್ಪತ್ರೆ ಇಲ್ಲ. ನಿರುದ್ಯೋಗ ಹಸಿವು ಕಾರ್ಮಿಕರ ಪಾಡು ಕೇಳುವವರಿಲ್ಲ. ಆರ್ಥಿಕತೆ ಕುಸಿದಿದೆ/ ರೈತರ ಕಾರ್ಮಿಕರ ಪ್ರತಿಭಟನೆ ಸಾವು ನೋವು ಕಣ್ಮುಂದೆ ಇದೆ. ಮಕ್ಕಳ ವಿದ್ಯಾಭ್ಯಾಸ ಇಲ್ಲ. ಯುವಜನತೆಗೆ ಕೆಲಸ ಇಲ್ಲ. ಆದರು ಏನ್ ಗುರು ನಿನ್ ತೆವಲು. ಮೊದಲು ಮಾನವನಾಗು ಕೋಮುವಾದಿಯಲ್ಲ ಎಂದು ರಮೇಶ್ ಎಂಬವರು ತಿಳಿಸಿದ್ದಾರೆ.

ಆಯ್ತು ಸೇಠು ನಿನ್ನ ದಾರಿಗೆ ಬರೋಣ. ಈ ದೇಶದ ಮುಸ್ಲಿಮರು ಸರಿಯಿಲ್ಲ. ಓಕೆ. ಈಗ HIGH ALERT ಆಗಿ ಬಾ- ಬಾಬಾ ಸಾಹೇಬರು "ಹಿಂದೂ ಆಗಿ ಸಾಯಲಾರೆ" ಅಂತಾ ಹೇಳಿದ್ದು ಮತ್ತು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದು ಯಾಕೆ ? ಕರುಳು ಕಿತ್ತು ಒಂದ ವಿಡಿಯೋ ಮಾಡು. ಹೆಂಗ್ ಪುಂಗ್ಲಿ ಎಂದು ಬಸಯ್ಯ ಮಠ ಎಂಬವರು ವ್ಯಂಗ್ಯವಾಡಿದ್ದಾರೆ.

ಮೊದಲು ಡಾ.ಅಂಬೇಡ್ಕರರು ಮನುಸ್ಮೃತಿಗೆ ಒದ್ದು ಅದು ಸುಟ್ಟಿದ್ದೇಕೆ ಎಂದು ಹೇಳಿದರೆ ಒಳ್ಳೆಯದು. ಹಾಗೂ ಪುಣೆಯಲ್ಲಿ ಡಾ.ಅಂಬೇಡ್ಕರರನ್ನು ಈ ಮನುವಾದಿಗಳು ಚುನಾವಣೆಯಲ್ಲಿ ಸೋಲಿಸಿದ್ದಾಗ ಪ.ಬಂಗಾಳದಲ್ಲಿ ಇದೇ ಮುಸ್ಲಿಮರು ಡಾ.ಅಂಬೇಡ್ಕರರನ್ನು ಗೆಲ್ಲಿಸಿದ್ದು ಸಹ ಹೇಳಬೇಕು. ನೀವು ಇದು ಹೇಳಲ್ಲ. ಏಕೆಂದರೆ ನೀವು ಇತಿಹಾಸ ತಿರುಚುವವರು ಎಂದು ಶ್ರೀಧರ್ ರಾಜ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News