ರಾಜ್ಯದ ಒಂದು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ಮತದಾನ ಪ್ರಕ್ರಿಯೆ ಬಿರುಸು

Update: 2021-04-17 03:58 GMT

ಬೆಂಗಳೂರು, ಎ.17: ಆಡಳಿತರೂಪ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಮಧ್ಯೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಇಂದು ಬರೆಯಲಿದ್ದಾನೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 7ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚುನಾವಣ ಕಣದಲ್ಲಿರುವ ಹಲವು ಅಭ್ಯರ್ಥಿಗಳು ಬೆಳಗ್ಗೆಯೇ ಮತದಾನ ನಡೆಸಿದ್ದು, ಮತದಾನ ಚುರುಕುಗೊಳ್ಳುತ್ತಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ತಮ್ಮ ಪುತ್ರಿಯರೊಂದಿಗೆ ಮತದಾನ ಮಾಡಿದರು‌.

ಮಂಗಳಾ ಸುರೇಶ್ ಅಂಗಡಿ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆ ಮತಗಟ್ಟೆ ಕೇಂದ್ರದ ಮತಗಟ್ಟೆ ಸಂಖ್ಯೆ 3ರಲ್ಲಿ ಸರತಿ ಸಾಲಿನಲ್ಲಿ ನಿಂತು ಕೋವಿಡ್ ಮಾರ್ಗಸೂಚಿ ಅನುಸರಿಸಿ ಮತದಾನ ಮಾಡಿದರು. ಈ ವೇಳೆ ಮಂಗಳಾ ಅಂಗಡಿ ಜೊತೆಗೆ ಪುತ್ರಿ ಡಾ.ಸ್ಫೂರ್ತಿ ಪಾಟೀಲ, ಸೊಸೆ ಶ್ರದ್ಧಾ ಶೆಟ್ಟರ ಕೂಡ ಆಗಮಿಸಿ ಮತದಾನ ಮಾಡಿದರು.‌

ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಶ್ರೀಮತಿ ಪ್ರೀತಿ ಪಾಟೀಲ ಜೊತೆಗೆ ಹೊಸೂರ ಬಸವಣ ಗಲ್ಲಿಯಲ್ಲಿರುವ ಮರಾಠಿ ಶಾಲೆಯ ಮತಗಟ್ಟೆಯಲ್ಲಿ ಮುಂಜಾನೆ 7 ಗಂಟೆಗೆ ತಮ್ಮ ಮತವನ್ನು ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News