ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: 5ನೇ ಹಂತದ ಮತದಾನ ಆರಂಭ

Update: 2021-04-17 03:56 GMT

ಕೊಲ್ಕತ್ತಾ: ಕೋವಿಡ್-19 ಸೋಂಕಿನ ಎರಡನೇ ಅಲೆಯ ಅಬ್ಬರದ ನಡುವೆಯೇ ಪಶ್ಚಿಮ ಬಂಗಾಳದಲ್ಲಿ 5ನೇ ಹಂತದ ಮತದಾನ ಆರಂಭವಾಗಿದೆ. ರಾಜ್ಯ ವಿಧಾನಸಭೆಯ 45 ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು, 300 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

ಮುಂದಿನ ಮೂರು ಹಂತಗಳ ಪ್ರಚಾರ ಸಮಯಕ್ಕೆ ಚುನಾವಣಾ ಆಯೋಗ ಮಿತಿ ವಿಧಿಸಿದ್ದು, ಪ್ರತಿ ಹಂತಕ್ಕೂ ಪ್ರಚಾರ ರಹಿತ ಅವಧಿಯನ್ನು 72 ಗಂಟೆಗಳಿಗೆ ವಿಸ್ತರಿಸಿದೆ. ಜಲಪೈಗುರಿ, ಕಲಿಂಪಾಂಗ್, ಡಾರ್ಜಿಲಿಂಗ್ ಜಿಲ್ಲೆಗಳಲ್ಲಿ ಹಾಗೂ ಭಾಗಶಃ ನಾದಿಯಾ, ನಾರ್ತ್ 24 ಪರಗಣ ಮತ್ತು ಪರ್ಬಾ ಬರ್ಧಮಾನ್ ಜಿಲ್ಲೆಗಳ 45 ಕ್ಷೇತ್ರಗಳ 15789 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.

ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿಗೆ ಐದನೇ ಹಂತ ನಿರ್ಣಾಯಕ ಕದನ ಎನಿಸಿದೆ. ಉತ್ತರ ಬಂಗಾಳದ 13 ಕ್ಷೇತ್ರಗಳಲ್ಲಿ ಬಿಜೆಪಿ ಬಿಗಿ ಹಿಡಿತ ಹೊಂದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ದಕ್ಷಿಣ ಬಂಗಾಳದಲ್ಲಿ ಪ್ರಾಬಲ್ಯ ಹೊಂದಿದೆ.

ಶಾಂತಿಯುತ ಮತದಾನವನ್ನು ಖಾತರಿಪಡಿಸುವ ದೃಷ್ಟಿಯಿಂದ ಚುನಾವಣೆಗೆ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದ್ದು, ಕೇಂದ್ರೀಯ ಪಡೆಗಳ 1071 ತುಕಡಿಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News