ಮ್ಯಾನ್ಮಾರ್: 23,000 ಕೈದಿಗಳ ಬಿಡುಗಡೆ

Update: 2021-04-17 15:48 GMT

ಯಾಂಗನ್ (ಮ್ಯಾನ್ಮಾರ್), ಎ. 17: ಮ್ಯಾನ್ಮಾರ್‌ನ ಸೇನಾ ಸರಕಾರವು 23,000ಕ್ಕಿಂತಲೂ ಅಧಿಕ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತಿಸುತ್ತಿದೆ. ಆದರೆ, ಸೇನಾ ಕ್ಷಿಪ್ರಕ್ರಾಂತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಬಂಧನ ವಾರಂಟ್ ಹೊರಡಿಸುವುದನ್ನು ಹಾಗೂ ಬಂಧಿಸುವುದನ್ನು ಮುಂದುವರಿಸಿದೆ.

ಬಿಡುಗಡೆಗೊಳ್ಳುವವರಲ್ಲಿ ಸೇನಾಡಳಿತ ವಿರೋಧಿ ಪ್ರತಿಭಟನಕಾರರಾಗಲಿ, ಪ್ರತಿಭಟನೆಗಳನ್ನು ವರದಿ ಮಾಡಿರುವುದಕ್ಕಾಗಿ ಬಂಧಿಸಲ್ಪಟ್ಟಿರುವ ಪತ್ರಕರ್ತರಾಗಲಿ ಇಲ್ಲ.

ದೇಶಾದ್ಯಂತವಿರುವ ಜೈಲುಗಳು ಶನಿವಾರದಿಂದ ಆರಂಭಿಸಿ 23,000 ಕೈದಿಗಳನ್ನು ಬಿಡುಗಡೆ ಮಾಡುತ್ತವೆ ಎಂದು ಬಂದೀಖಾನೆ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News