ಬಿಎಸ್‌ವೈಗೆ ಕಿವಿ ಕೇಳಿಸುತ್ತಿಲ್ಲ, ಹೀಗಾಗಿ ಅವರಿಗೆ ತಪ್ಪು ದಾರಿ ಹೇಳುತ್ತಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್

Update: 2021-04-18 14:53 GMT

ಬಾಗಲಕೋಟೆ, ಎ. 18: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ. ಹೀಗಾಗಿ ಅವರ ಅಕ್ಕಪಕ್ಕದಲ್ಲಿರುವವರು ಅವರಿಗೆ ಸರಿಯಾದ ಮಾಹಿತಿ ನೀಡದೆ ತಪ್ಪು ದಾರಿ ಹೇಳುತ್ತಿದ್ದಾರೆ. ಆದುದರಿಂದ ಅವರು ಸಿಎಂ ಸ್ಥಾನ ಬಿಟ್ಟುಕೊಟ್ಟರೆ ನಾವು ಮುಖ್ಯಮಂತ್ರಿ ಆಗಬಹುದು' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿವಾರ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ `ಶರಣು ಶರಣಾರ್ಥಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ದಿನದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ಖಂಡಿತ. ನಾನು ಸಿಎಂ ಪಟ್ಟಿಯಲ್ಲಿ (ಲಿಸ್ಟ್) ಇದ್ದೇನೆ. ಬಿಜೆಪಿ ಸರಕಾರದಲ್ಲಿ ಕೆಲವು ನಕಲಿ (ಡೂಪ್ಲಿಕೇಟ್) ಸಚಿವರಿದ್ದಾರೆ. ಸಮಾಜವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಅವರಿಗೆ ಸಮಾಜದ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಭರವಸೆ ಈಡೇರಿಸಲಿದ್ದರೆ ಹೋರಾಟ: ರಾಜ್ಯದಲ್ಲಿನ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲಾತಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ವಿಧಾನಸಭೆ ಅಧಿವೇಶನದದಲ್ಲಿ ಭರವಸೆ ನೀಡಿದ್ದಾರೆ. ಆ ಭವರಸೆಯನ್ನು ಪಡೆಯಲು ನಾನು ಹೋರಾಟ ಮಾಡಬೇಕಾಯಿತು. ಇದೀಗ ಸಿಎಂ ಮಾತು ತಪ್ಪುವಂತಿಲ್ಲ. ಒಂದು ವೇಳೆ ಅವರು ನೀಡಿದ ಭರವಸೆ ಈಡೇರಿಸಲಿದ್ದರೆ ಹೋರಾಟ ಮಾಡಲಾಗುವುದು ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News