ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೋವಿಡ್ ಪಾಸಿಟಿವ್

Update: 2021-04-19 12:49 GMT

ಬೆಳಗಾವಿ, ಎ. 19: ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೆ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊರೋನ ಪಾಸಿಟಿವ್ ಆಗಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ನಾನು ಹಾಗೂ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಕೊರೋನ ಸೋಂಕಿನಿಂದ ಹೋಂ ಕ್ವಾರಂಟೈನ್ ಆಗಿದ್ದು, ಆದಷ್ಟು ಬೇಗ ಗುಣಮುಖವಾಗಿ ಎಂದಿನಂತೆ ನಿಮ್ಮ ಜೊತೆ ಬೆರೆಯಲು ನಾನು ಕಾತುರಳಾಗಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ, ಕರೆಗಳ ಮೂಲಕ ಹಾಗೂ ವಾಟ್ಸಪ್‍ಗಳಲ್ಲಿ ನಿಮ್ಮೆಲ್ಲರ ಕಾಳಜಿ, ಕನಿಕರ, ಹಾರೈಕೆಗಳಿಗೆ ನನ್ನ ಮನಸ್ಸು ತುಂಬಿ ಬರುತ್ತಿದೆ.

ನಾನು ಈ ಕ್ಷೇತ್ರದ ಶಾಸಕಿಯಾಗಿದ್ದಕ್ಕೆ ಸಾರ್ಥಕವೆನಿಸುತ್ತಿದೆ. ಕ್ಷೇತ್ರದಲ್ಲಿ ನೀವು ದೇವಸ್ಥಾನಗಳಿಗೆ ತೆರಳಿ ಪೂಜೆ, ಪುನಸ್ಕಾರಗಳ ಮೂಲಕ ನನ್ನ ಹಾಗೂ ಸಹೋದರನ ಒಳಿತಿಗಾಗಿ ಹಾರೈಸುತ್ತಿರುವುದು ನಮ್ಮ ಪೂರ್ವಜನ್ಮದ ಪುಣ್ಯವೆನಿಸುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಾರೈಕೆಗಳ ಮೂಲಕ ಆದಷ್ಟೂ ಬೇಗ ಕ್ಷೇತ್ರಕ್ಕೆ ಮರಳಿ ನಿಮ್ಮ ಜೊತೆ ಬೆರೆಯಲಿದ್ದೇನೆ ಹಾಗೂ ನಿಮ್ಮೆಲ್ಲರ ಹಾರೈಕೆಗಳಿಗೆ ನಾನೆಂದೂ ಚಿರಋಣಿ' ಎಂದು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News