ಸರ್ವಪಕ್ಷ ಸಭೆ ಬಳಿಕ ಕಠಿಣ‌ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ: ಸಚಿವ ಆರ್.ಅಶೋಕ್

Update: 2021-04-19 14:35 GMT

ಬೆಂಗಳೂರು, ಎ.19: ಎರಡು ತಿಂಗಳು ನಿರ್ಣಾಯಕ ಸಮಯವಾಗಿದೆ. ಬೆಂಗಳೂರಲ್ಲಿ ಕಠಿಣ ನಿಲುವು ತಳೆಯುವ ದೃಷ್ಟಿಯಿಂದ ಈ ಸಭೆ ಕರೆಯಲಾಗಿದೆ. ಕಳೆದ ಬಾರಿ ಹೋಂ‌ ಐಸೋಲೇಷನ್ ಆದವರಿಗೆ ಸೀಲ್ ಹಾಕಲಾಗಿತ್ತು. ಅದನ್ನೇ ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಆರ್.ಅಶೋಕ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲ ಸಣ್ಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸ್ಟೋರ್ ಮಾಡಲು ಅವಕಾಶ ಇಲ್ಲ. ಅದಕ್ಕಾಗಿ ನೋಡಲ್ ಅಧಿಕಾರಿ ನೇಮಕ‌ ಮಾಡಿ ಸಣ್ಣ ಆಸ್ಪತ್ರೆಗೆ ಮೂರು ಬಾರಿ ಆಕ್ಸಿಜನ್ ಸಿಲಿಂಡರ್ ಸರಬರಾಜು‌ ಮಾಡಲು ಸೂಚನೆ ನೀಡಲಾಗಿದೆ. ಜಿಂದಾಲ್ ಕಂಪನಿ ಜತೆ ಚರ್ಚಿಸಿದ್ದೇವೆ. ಅವರು ಆಕ್ಸಿಜನ್ ಪೂರೈಕೆ ಮಾಡಲು ಸಹಕಾರ ಕೊಡುವುದಾಗಿ ಹೇಳಿದ್ದಾರೆ ಎಂದರು.

ಕಾಳ‌ಸಂತೆಯಲ್ಲಿ ಆಕ್ಸಿಜನ್ ಮಾರಾಟ ಬಗ್ಗೆನೂ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. 50% ಬೆಡ್ ಪಡೆಯಲು ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. ಹಲವರು ಆತಂಕದಿಂದ ಅಗತ್ಯ ಇಲ್ಲದಿದ್ದರೂ ಆಸ್ಪತ್ರೆ ಹೋಗುತ್ತಿದ್ದಾರೆ. ಹೀಗಾಗಿ ಅವರಿಗಾಗಿ ಇನ್ನು ಮುಂದೆ ಕೋವಿಡ್ ಕೇರ್ ಸೆಂಟರ್ ಶುರು ಮಾಡುತ್ತೇವೆ ಎಂದು ಹೇಳಿದರು.

ಕೋವಿಡೇತರ ಗಂಭೀರ ಆರೋಗ್ಯ ಸ್ಥಿತಿಯಲ್ಲಿಲ್ಲದ ರೋಗಿಗಳನ್ನು ಆಸ್ಪತ್ರೆಗಳಿಂದ 3 ಸ್ಟಾರ್ ಹೊಟೇಲ್ ಗಳಿಗೆ ಶಿಫ್ಟ್ ಮಾಡಿ ಅಲ್ಲೇ ಚಿಕಿತ್ಸೆ ನೀಡಲಾಗುವುದು. ಆ ಮೂಲಕ ಕೋವಿಡ್ ಅಗತ್ಯ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ಮಾಡಲು 24 ತಾಸು ಅವಕಾಶ ಇದೆ. ರೆಮಿಡಿಸೆವೆರ್ ಔಷಧಿಯನ್ನು ಅಗತ್ಯ ಇರುವವರಿಗೆ ಮಾತ್ರ ನೀಡಲು ಸೂಚನೆ ನೀಡಲಾಗಿದೆ ಎಂದು ಅವರು, 144 ಸೆಕ್ಷನ್ ಹಾಕಲು ಕಾಂಗ್ರೆಸ್ ಸಲಹೆ ನೀಡಿದೆ. ಲಾಕ್ ಡೌನ್ ಮಾಡದಿರುವಂತೆಯೂ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಸಿಎಂ ಸಭೆಯಾದ್ಯಂತ ಆಸ್ಪತ್ರೆಯಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಕೋವಿಡ್ ನಿಯಂತ್ರಣ ಸಂಬಂಧ ನಾಳೆ ಸರ್ವ ಪಕ್ಷ ಸಭೆ ಬಳಿಕ ಕಠಿಣ‌ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಿದ್ದಾರೆ. ಲಾಕ್‌ಡೌನ್ ಬೇಡ ಅನ್ನೋದು ಸಭೆಯಲ್ಲಿನ ಒಮ್ಮತದ ಅಭಿಪ್ರಾಯವಾಗಿತ್ತು. ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಮಾಡಲು ತೀರ್ಮಾನ ಮಾಡಲಾಗಿದೆ. ರಾಮ, ರಹೀಮ, ಯೇಸು, ಬುದ್ಧ ಎಲ್ಲರೂ ಒಂದೇ. ಎಲ್ಲರಿಗೂ ಸಮಾನ ಕಾನೂನು ಮಾಡುತ್ತೇವೆ ಎಂದು ಅಶೋಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News