ಮೈಸೂರು: ನಕಲಿ ರೆಮ್ಡಿಸಿವಿರ್ ಔಷಧ ಮಾರಾಟ ಜಾಲ ಪತ್ತೆ; ಆರೋಪಿ ಬಂಧನ

Update: 2021-04-19 16:32 GMT

ಮೈಸೂರು,ಎ.19: ಕೊರೋನ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧ ಎಂದು ಹೇಳಲಾಗುತ್ತಿದ್ದ ನಕಲಿ ರೆಮ್ಡಿಸಿವಿರ್ ಔಷಧ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಯಿಂದ 2,82,000 ರೂ. ನಗದು ಸೇರಿದಂತೆ ನಕಲಿ ಔಷಧಿ ವಶಕ್ಕೆ ಪಡೆಯಲಾಗಿದೆ. ಸ್ಟಾಪ್ ನರ್ಸ್ ನಿಂದ ಈ ಕೃತ್ಯವೆಸಗಲಾಗಿದೆ ಎಂದು ಹೇಳಿದರು.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬಾತ ಹಲವು ತಿಂಗಳಿನಿಂದ ನಕಲಿ ಔಷಧಿ ಮಾರಾಟ ಮಾಡುತ್ತಿದ್ದ. ರೆಮ್ಡಿಸಿವಿರ್ ಔಷಧ ಬಳಕೆಯಾದ ಖಾಲಿ ಬಾಟೆಲ್ ಗಳನ್ನು ಪಡೆದು ನೂರು ರೂ. ಖರ್ಚು ಮಾಡಿ ರೆಮ್ಡಿಸಿವಿರ್ ಬಾಟಲಿಗೆ ಸೆಪ್ಟ್ರಿಯಾಕ್ಸೊನ ಎಂಬ ಆಂಟಿಬಯೋಟಿಕ್ ಔಷಧ ಹಾಗೂ ನಾರ್ಮಲ್ ಸಲೈನ್ ಬಳಸುತ್ತಿದ್ದ. ಖಾಲಿ ಬಾಟೆಲ್ ಗಳನ್ನು ಶಿವಪ್ಪ ಮಂಗಳ ಎಂಬುವವರು ಮಾರ್ಕೆಟ್ ಮಾಡುತ್ತಿದ್ದರು ಎಂದು ತಿಳಿಸಿದರು.

ಇನ್ನು ಈ ಕೃತ್ಯದಲ್ಲಿ ಪ್ರಶಾಂತ್ ಹಾಗೂ ಮಂಜುನಾಥ್ ಎಂಬಿಬ್ಬರು ಭಾಗಿಯಾಗಿದ್ದರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News