ರಾಜ್ಯದಲ್ಲಿ 60 ದಿನಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಡಿ 58 ಪ್ರಕರಣಗಳು ದಾಖಲು

Update: 2021-04-21 12:36 GMT

ಬೆಂಗಳೂರು, ಎ.21: ಗೋಹತ್ಯೆ ನಿಷೇಧ ಮತ್ತು ಹಸುಗಳ ಸಂರಕ್ಷಣೆ ಕಾಯ್ದೆಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ನಂತರ ಕಳೆದ 60 ದಿನಗಳಲ್ಲಿ ಜಾನುವಾರುಗಳನ್ನು ಮಾಂಸಕ್ಕಾಗಿ ಹತ್ಯೆಗೈದ ಆರೋಪದಡಿ 58 ಪ್ರಕರಣಗಳನ್ನು ದಾಖಲಿಸಲಾಗಿದೆ.

ಬೆಂಗಳೂರು ಸೇರಿದಂತೆ ಜಿಲ್ಲಾವಾರು ಘಟಕಗಳಲ್ಲೂ ಪ್ರಕರಣಗಳು ದಾಖಲಾಗಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 200ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗೋಹತ್ಯೆ ನಿಷೇಧ ಮತ್ತು ಹಸುಗಳ ಸಂರಕ್ಷಣೆ ಕಾಯ್ದೆಯಡಿ ಜಾನುವಾರುಗಳನ್ನು ಅಕ್ರಮವಾಗಿ ಮಾಂಸಕ್ಕಾಗಿ ಸಾಗಿಸುವುದು, ವಧೆ ಮಾಡುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಪತ್ತೆ ಹಚ್ಚಿ ಬಂಧಿಸುವ ಅಧಿಕಾರವನ್ನು ನೀಡಲಾಗಿದೆ. ಪಶುವೈದ್ಯರಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆಯದೆ ಜಾನುವಾರುಗಳನ್ನು ರಾಜ್ಯದಿಂದ ಹೊರಗೆ ಸಾಗಾಟ ಮಾಡುತ್ತಿದ್ದರೆ ಅಂತವರ ಮೇಲೆ ದಾಳಿ ಮಾಡಿ ಜಾನುವಾರುಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಕೂಡ ಹೊಸ ಕಾಯ್ದೆಯಡಿ ಇರುತ್ತದೆ.

ಇನ್ನು, ಆರೋಪಿಗಳ ತಪ್ಪು ಸಾಬೀತು ಆದರೆ, ಶಿಕ್ಷೆಯ ಪ್ರಮಾಣವನ್ನು ಆಧರಿಸಿ 50 ಸಾವಿರದಿಂದ 7 ಲಕ್ಷದವರೆಗೆ ದಂಡ ಸಹಿತ ಮೂರರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾಯ್ದೆಯಡಿ ಇದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News