ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಅಳವಡಿಕೆ: ದೇಶದ ಹೈಕೋರ್ಟ್ ಗಳಿಗೆ ಮಾದರಿಯಾದ ರಾಜ್ಯ ಹೈಕೋರ್ಟ್

Update: 2021-04-21 18:07 GMT

ಬೆಂಗಳೂರು, ಎ.21: ಕೊರೋನ ನಡುವೆಯೂ ನ್ಯಾಯಾಲಯಗಳನ್ನು ಸಮರ್ಥವಾಗಿ ಮುನ್ನಡೆಸುವ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ದೇಶದ ಎಲ್ಲ ಹೈಕೋರ್ಟ್ ಗಳಿಗೆ ಮಾದರಿಯಾಗಿದೆ.

ಕೊರೋನ ಸೋಂಕು ವ್ಯಾಪಿಸಿದ ಬಳಿಕ ಇದ್ದ ಸೌಲಭ್ಯಗಳನ್ನೇ ಬಳಸಿಕೊಂಡು ಹೈಕೋರ್ಟ್ ನಲ್ಲಿ ವಿಸಿ ಮೂಲಕ ಕಲಾಪ ನಡೆಸಲಾಗುತ್ತಿತ್ತು. ಕೋವಿಡ್ ತಣ್ಣಗಾದ ಬಳಿಕ ಫಿಸಿಕಲ್ ವಿಚಾರಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತಾದರೂ, ವಿಸಿ ಸೌಲಭ್ಯವನ್ನು ಮುಂದುವರೆಸಿಕೊಂಡು ಬರಲಾಗಿತ್ತು. ಆದರೆ, ಕೋವಿಡ್ ಎರಡನೆ ಅಲೆ ಎದುರಾದ ನಂತರ ಹೈಕೋರ್ಟ್ ಸುಗಮ ಕಲಾಪಕ್ಕಾಗಿ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಈಗಾಗಲೇ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳ ಪೀಠ ಸೇರಿದಂತೆ 13 ಪೀಠಗಳಲ್ಲಿ ಈ ಹೈಬ್ರಿಡ್ ವಿಸಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಮುಂದಿನ ವಾರದಲ್ಲಿ ಈ ಸೌಲಭ್ಯವನ್ನು ಒಟ್ಟು 26 ಪೀಠಗಳಿಗೆ ವಿಸ್ತರಿಸಲಾಗುತ್ತದೆ. ನಂತರದಲ್ಲಿ ಕಲಬುರಗಿ ಹಾಗೂ ಧಾರವಾಡ ಪೀಠಗಳಲ್ಲಿಯೂ ಇದೇ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News