ಕನ್ನಡ ಚಲನಚಿತ್ರಗಳ ಪೋಸ್ಟರ್ ವಿನ್ಯಾಸಕ ಮಸ್ತಾನ್ ನಿಧನ

Update: 2021-04-21 18:09 GMT

ಬೆಂಗಳೂರು, ಎ,21: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಕನ್ನಡ ಚಲನಚಿತ್ರಗಳ ಪೋಸ್ಟರ್ ವಿನ್ಯಾಸಕ ಮಸ್ತಾನ್(63) ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ 42ವರ್ಷಗಳಿಂದ ಚಲನಚಿತ್ರ ಪೋಸ್ಟರ್ ಗಳ ವಿನ್ಯಾಸಕರಾಗಿದ್ದ ಮಸ್ತಾನ್, ಸುಮಾರು 200 ಚಿತ್ರಗಳಿಗೆ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಹಾಗೂ ಶುಕ್ಲಾಂ ಬರದರಂ, ಕಲ್ಲೇಶಿ ಮಲ್ಲೇಶಿ, ಸಿತಾರ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಅವರ ಅಗಲಿಕೆಗೆ ಸಿನೆಮಾ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News