ಕೊರೋನ ನಿಯಂತ್ರಣ ಸಂಬಂಧ ಆರೋಪ, ಪ್ರತ್ಯಾರೋಪ ಮಾಡಿ ಸಣ್ಣವರಾಗಬೇಡಿ: ಸಚಿವ ಸುಧಾಕರ್

Update: 2021-04-22 05:49 GMT

ಮೈಸೂರು : ಕೊರೋನ ನಿಯಂತ್ರಣ ಸಂಬಂಧ ಆರೋಪ, ಪ್ರತ್ಯಾರೋಪ ಮಾಡಿ ಸಣ್ಣವರಾಗಬೇಡಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಕೊರೋನ ರಾಜ್ಯಕ್ಕೆ ಮತ್ತು ದೇಶಕ್ಕೆ ಬಂದಿಲ್ಲ, ಇಡೀ ಮನುಕುಲಕ್ಕೆ ಬಂದಿದೆ. ಆರೋಗ್ಯ ಸೇವೆಯಲ್ಲಿ ಮುಂದುವರೆದಿರು ರಾಷ್ಟ್ರಗಳು ಸಹ ಕೊರೋನ ನಿಯಂತ್ರಣದಲ್ಲಿ ವಿಫಲಗೊಂಡಿವೆ. ಹಾಗಾಗಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಕೊರೋನ ನಿಯಂತ್ರಣ ಮಾಡಲು ವಿರೋಧ ಪಕ್ಷದವರು ಮತ್ತು ಆಡಳಿತ ಪಕ್ಷದವರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೊರೋನ ಸ್ಥಿತಿ ಹೀಗೆ ಮುಂದುವರೆದರೆ ಆಕ್ಸಿಜನ್ ಅವಶ್ಯಕತೆ ಬೇಕಾಗುತ್ತದೆ. ಈ ಸಂಬಂಧ ಕೈಗಾರಿಕೆ, ಗೃಹ ಸಚಿವರು ಮತ್ತು ನಾನು ಈಗಾಗಲೇ ಕೈಗಾರಿಕೋದ್ಯೋಮಿಗಳೊಂದಿಗೆ ಮಾತನಾಡಿ ಆಕ್ಸಿಜನ್ ನೀಡುವಂತೆ ಮನವಿ ಮಾಡಿದ್ದೇವೆ. ಅವರುಗಳು ಸಹ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಸಚಿವರಿಗೆ1.5 ಲಕ್ಷ ಮೆಟ್ರಿಕ್ ಟನ್ ಆಕ್ಸಿಜನ್ ಗೆ ಬೇಡಿಕೆ ಇಟ್ಟು ಪತ್ರ ಬರೆದಿದ್ದಾರೆ. ಹಾಗಾಗಿ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News