ಬೆಂಗಳೂರು ನಗರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಸಚಿವ ಡಾ.ಕೆ.ಸುಧಾಕರ್

Update: 2021-04-22 11:13 GMT

ಬೆಂಗಳೂರು, ಎ. 22: ರಾಜಧಾನಿ ಬೆಂಗಳೂರು ನಗರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಬಂದಿದೆ. ಕೊರೋನ ನಾಗಲೋಟ ಮುಂದುವರೆದಿದ್ದು, ಹಾಸಿಗೆ ಸಾಮರ್ಥ್ಯ ಹೆಚ್ಚಳ ಮಾಡಲೇಬೇಕಾದ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‍ಡಿಎಂಎ) ಪ್ರಕಾರ ಎಲ್ಲ ವೈದ್ಯಕೀಯ ಕಾಲೇಜು 13 ಖಾಸಗಿ ಹಾಗೂ ಸರಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಕೋವಿಡ್ ಸೋಂಕಿತರಿಗೆ ಹಾಸಿಗೆ ಮೀಸಲಿಡಲು ಆದೇಶ ಹೊರಡಿಸಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ ಏಳೂವರೆ ಸಾವಿರ ಹಾಸಿಗೆಗಳು ವೈದ್ಯಕೀಯ ಕಾಲೇಜಿನಲ್ಲಿ ಮಾತ್ರ ಸಿಗುತ್ತಿದೆ. ಬೆಂಗಳೂರಿನ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ 30 ಹಾಸಿಗೆಗೂ ಹೆಚ್ಚಿರುವ ಕಡೆ ಕಡ್ಡಾಯವಾಗಿ ಕೋವಿಡ್‍ಯೇತರಕ್ಕೆ ಮಾತ್ರ ಸೀಮಿತ, 30 ಹಾಸಿಗೆಗಳಿಗೂ ಮೇಲೆ ಇರುವ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಮೀಡಲಿಡಲಾಗುವುದು. ಜನರಲ್ ಬೆಡ್ ಮಾತ್ರವಲ್ಲದೆ ಐಸಿಯು, ವೆಂಟಿಲೇಟರ್ ಎಚ್‍ಡಿಯು, ಎಚ್‍ಎಫ್‍ಎಲ್ ಮೀಸಲು ಇಡಲಾಗಿದೆ. ಯಾವುದೇ ಒಬ್ಬ ವ್ಯಕ್ತಿಗೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಬಾರದು ಎಂದು ಸಚಿವ ಸುಧಾಕರ್ ಹೇಳಿದರು.

ಬೆಂಗಳೂರಿನಲ್ಲಿ 2 ಸಾವಿರ ಐಸಿಯುನ ತಾತ್ಕಾಲಿಕ ಆಸ್ಪತ್ರೆ ಮಾಡಲಾಗುವುದು. ಎಲ್ಲ 8 ವಲಯಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಆಕ್ಸಿಜನ್ ಕಾನ್ಸಂಟ್ರೆಟರ್ ಗಾಳಿಯನ್ನು ಶುದ್ಧ ಮಾಡಿ ಆಕ್ಸಿಜನ್ ಮಾಡುವ ಎಕ್ಯುಪ್‍ಮೆಂಟ್ ತರಿಸಲಾಗುವುದು. ನಮ್ಮ ಜನರು ಆತ್ಮವಿಶ್ವಾಸದಿಂದ ಇರಿ. ಎಲ್ಲ ಅಧಿಕಾರಿಗಳೂ ದಿನದ 24 ಗಂಟೆಯೂ ಶ್ರಮಿಸಬೇಕು. ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಂದ ಸೂಚನೆ ನೀಡಲಾಗಿದೆ. ಹಾಸಿಗೆ, ಆಕ್ಸಿಜನ್ ಸಹಿತ ಎಲ್ಲ ವ್ಯವಸ್ಥೆ ಕಲ್ಪಿಸಲು ಸರಕಾರ ಕ್ರಮ ವಹಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News