ಕೋವಿಡ್ ಉಸ್ತುವಾರಿಗೆ ಐಪಿಎಸ್‍ ಅಧಿಕಾರಿಗಳ ನೇಮಕ

Update: 2021-04-22 14:37 GMT
ಪ್ರವೀಣ್ ಸೂದ್

ಬೆಂಗಳೂರು, ಎ.22: ಕೋವಿಡ್ ಎರಡನೇ ಸೋಂಕಿನ ಅಲೆ ಹಿನ್ನೆಲೆ ರಾಜ್ಯ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳುವ ಕ್ರಮಗಳನ್ನು ಪರಾಮರ್ಶಿಸಲು ಹಾಗೂ ಮಾರ್ಗಸೂಚನೆಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಉಸ್ತುವಾರಿಗಾಗಿ ಐಪಿಎಸ್ ಅಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದೆ.

ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದು, ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ (ಉತ್ತರ ವಲಯ)- ವಿಜಯಪುರ, ಬಾಗಲಕೋಟೆ, ಬೆಳಗಾವಿ. ಕೆಎಸ್‍ಪಿಎಚ್‍ಸಿಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಎನ್.ಮೂರ್ತಿ(ಬಳ್ಳಾರಿ ವಲಯ)-ಬಳ್ಳಾರಿ, ರಾಯಚೂರು.

ನೇಮಕಾತಿ ವಿಭಾಗದ ಎಡಿಜಿಪಿ ಅಮ್ರೀತ್ ಪೌಲ್(ದಕ್ಷಿಣ ವಲಯ)-ಮೈಸೂರು, ಮಂಡ್ಯ, ಹಾಸನ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅರುಣ್ ಜೆಜಿ ಚಕ್ರವರ್ತಿ (ಈಶಾನ್ಯ ವಲಯ)-ಬೀದರ್, ಕಲ್ಬುರ್ಗಿ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ (ಕೇಂದ್ರ ವಲಯ)-ಬೆಂ.ಗ್ರಾಮಾಂತರ, ತುಮಕೂರು.

ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ (ಪೂರ್ವ ವಲಯ)-ಶಿವಮೊಗ್ಗ, ದಾವಣಗೆರೆ. ಡಿಸಿಆರ್‍ಇ ಪೊಲೀಸ್ ಮಹಾ ನಿರೀಕ್ಷಕ ಹೇಮಂತ್ ನಿಂಬಾಳ್ಕರ್ (ಪಶ್ಚಿಮ ವಲಯ)-ದಕ್ಷಿಣ ಕನ್ನಡ, ಉಡುಪಿ ಉಸ್ತುವಾರಿಗಾಗಿ ನಿಯೋಜಿಸಲಾಗಿದೆ. ನಿಯೋಜನೆಗೊಂಡ ಅಧಿಕಾರಿಗಳು ಇಂದಿನಿಂದ(ಎ.22) ತಮ್ಮ ವಲಯಗಳಿಗೆ ಭೇಟಿ ನೀಡಿ ಆಯಾ ಜಿಲ್ಲೆಗಳಲ್ಲಿ ಕೋವಿಡ್ ವಿರುದ್ಧ ಜರುಗಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಹಾಗೂ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬೇಕಾದ ಕಾರ್ಯಗಳನ್ನು ಪರಾಮರ್ಶಿಸಬೇಕು.

ಡಿಜಿ-ಐಜಿಪಿ ಅವರಿಗೆ ಎ.26ರೊಳಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ. ಕೋವಿಡ್ ಸಮಸ್ಯೆ ಬಗೆಹರಿಯುವವರೆಗೂ ಕಾಲಕಾಲಕ್ಕೆ ಭೇಟಿ ನೀಡಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಾಮರ್ಶಿಸಬೇಕು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News