×
Ad

ಜಮಾಅತ್ ಉಲಮಾ ವತಿಯಿಂದ ಉಚಿತ ಆಕ್ಸಿಜನ್ ಸಿಲಿಂಡರ್

Update: 2021-04-25 21:07 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.25: ಕೋವಿಡ್ ಸೋಂಕಿನ ಪರಿಣಾಮ ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಲು ಜಮಾಅತ್ ಉಲಮಾ ಕರ್ನಾಟಕ ಸಂಘಟನೆ ಮುಂದಾಗಿದೆ.

ಒಂದು ಆಕ್ಸಿಜನ್ ಸಿಲಿಂಡರ್ ಗೆ 6 ಸಾವಿರ ರೂ. ಮುಂಗಡ ಪಾವತಿ ಮಾಡಿ, ರೋಗಿಗಳು ಈ ಸೌಲಭ್ಯ ಪಡೆಯಬಹುದಾಗಿದ್ದು, ಸಿಲಿಂಡರ್ ವಾಪಸ್ಸು ನೀಡಿದ ಬಳಿಕ ಪಾವತಿ ಮಾಡಿರುವ ಹಣ ನೀಡಲಾಗುವುದು ಎಂದು ಜಮಾಅತ್ ಉಲಮಾ ಕರ್ನಾಟಕದ ಸದಸ್ಯರೊಬ್ಬರು ತಿಳಿಸಿದರು.

ಎಲ್ಲಿ ಲಭ್ಯ, ಸಂಪರ್ಕ?: ನಾಗವಾರ, ಗೋವಿಂದಪುರ-ಮೊಬೈಲ್ ಸಂಖ್ಯೆ 8050902009, ಎಲೆಕ್ಟ್ರಾನಿಕ್ ಸಿಟಿ, ಶಿಕಾರಿಪಾಳ್ಯ- ಮೊಬೈಲ್ ಸಂಖ್ಯೆ 9740272787, ಗೌರಿಪಾಳ್ಯ, ಮೈಸೂರು ರಸ್ತೆ-ಮೊಬೈಲ್ ಸಂಖ್ಯೆ 7411705113, ಫ್ರೇಝರ್‍ಟೌನ್-ಮೊಬೈಲ್ ಸಂಖ್ಯೆ 7760230124, ಬಿಸ್ಮಿಲ್ಲಾನಗರ-ಮೊಬೈಲ್ ಸಂಖ್ಯೆ 9880005974, ಜಯನಗರ 4ನೇ ಬ್ಲಾಕ್ ಮೊಬೈಲ್ ಸಂಖ್ಯೆ 8123214140 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News