ಶಿವಮೊಗ್ಗ: ಗ್ರಾಹಕ ಸೇವಾ ಕೇಂದ್ರ ಅನುಮತಿ ಹೆಸರಿನಲ್ಲಿ ಮೋಸ; ಆರೋಪ

Update: 2021-04-25 17:10 GMT

ಶಿವಮೊಗ್ಗ: ಖಾಸಗಿ ಕಂಪನಿಯೊಂದರ ಗ್ರಾಹಕ ಸೇವಾ ಕೇಂದ್ರ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ ಘಟನೆ ವರದಿಯಾಗಿದೆ. ಸಾಗರ ತಾಲೂಕಿನ ಅಂದಾಪುರ ಗ್ರಾಮದ ವ್ಯಕ್ತಿಯೊಬ್ಬರು 60,500 ಕಳೆದು ಕೊಂಡಿದ್ದಾರೆ. 

ಫೇಸ್‌ಬುಕ್‌ನಲ್ಲಿ ಖಾಸಗಿ ಕಂಪೆನಿಯೊಂದರ ಹೆಸರಿನಲ್ಲಿ ಜಾಹೀರಾತು ನೀಡಲಾಗಿತ್ತು. ಇದನ್ನು ನಂಬಿ ಜಾಹೀರಾತಿನಲ್ಲಿ ನೀಡಿದ್ದ ಸೂಚನೆ ಅನ್ವಯ ಅರ್ಜಿಯನ್ನು ತುಂಬಿ ಕಳುಹಿಸಿದ್ದರು. ನಂತರ ಅಪರಿಚಿತ ವ್ಯಕ್ತಿಯೊಬ್ಬರ ಕರೆ ಮಾಡಿ ಸುಸಜ್ಜಿತ ಕಚೇರಿ, ಕಂಪ್ಯೂಟರ್‌, ಸಿಸಿ ಕ್ಯಾಮೆರಾ ಸೌಲಭ್ಯ ಕಲ್ಪಿಸಲು 60,500 ರೂ. ಹಂತ ಹಂತವಾಗಿ ಪಡೆದಿದ್ದಾರೆ. ನಂತರ, ಯಾವುದೇ ರೀತಿಯ ಪರವಾನಗಿ ನೀಡಿಲ್ಲ. ಇದರಿಂದ ಮೋಸ ಹೋಗಿರುವುದಾಗಿ ತಿಳಿದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News