ಶಿವಮೊಗ್ಗ: ನಕಲಿ ಚಿನ್ನ ನೀಡಿ ವಂಚಿಸಿದ ಆರೋಪಿ ಬಂಧನ

Update: 2021-04-25 17:14 GMT

ಶಿವಮೊಗ್ಗ: ನಕಲಿ ಚಿನ್ನ ನೀಡಿ ಬಾಗಲಕೋಟೆಯ ವ್ಯಕ್ತಿಯನ್ನು ವಂಚಿಸಿದ ಆರೋಪದ ಮೇರೆಗೆ ಶಿವಮೊಗ್ಗದ ವ್ಯಕ್ತಿಗೆ ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಹಾಡೋನಹಳ್ಳಿಯ ಉಲ್ಲಾಸ್‌ ಎಂಬುವವರನ್ನು ಬಂಧಿಸಿದ್ದು, ಈತನ ತಾಯಿ ಗಂಗಮ್ಮ ಎಂಬುವವರು ಪರಾರಿಯಾಗಿದ್ದಾರೆ.

ಬಾಗಲಕೋಟೆಯ ಇಳಕಲ್‌ ತಾಲೂಕಿನ ಗೋರಬಾಳ ಗ್ರಾಮದ ಪರಶುರಾಮ್‌ ಎಂಬುವವರಿಗೆ ನಕಲಿ ಚಿನ್ನ ನೀಡಿ 4.80 ಲಕ್ಷ ರೂ,. ಪಡೆದಿದ್ದರು. 

ಮನೆಯ ಅಡಿಪಾಯದ ವೇಳೆ ಚಿನ್ನ ಸಿಕ್ಕಿರುವುದಾಗಿ ಹೇಳಿ ನಂಬಿಸಿ ಪರಶುರಾಮ್‌ ಅವರಿಗೆ ಮೋಸ ಮಾಡಲಾಗಿತ್ತು. ವಂಚಕರ ನಯವಾದ ಮಾತುಗಳನ್ನು ನಂಬಿ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮಕ್ಕೆ ಬಂದಿದ್ದರು. ಅವರಿಗೆ ಆಗ ನಂಬಿಕೆ ಬರಲಿ ಎಂಬ ಕಾರಣಕ್ಕೆ ಒಂದು ಚಿನ್ನದ ಬಿಲ್ಲೆನೀಡಿದ್ದರು. ಬಳಿಕ ಹಣ ಪಡೆದು ಅರ್ಧ ಕೆಜಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿದ್ದಾರೆ. ಮನೆಗೆ ಹೋಗಿ ನೋಡಿದಾಗ ಪರಶುರಾಮ್‌ಗೆ ತಾನು ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಉಲ್ಲಾಸ್‌ನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ 2.72 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News