ಉತ್ತರಪ್ರದೇಶ: ಗುರುದ್ವಾರದಿಂದ ‘ಆಮ್ಲಜನಕ ಲಾಂಗರ್’

Update: 2021-04-25 18:43 GMT

ಘಾಝಿಯಾಬಾದ್(ಉತ್ತರಪ್ರದೇಶ): ದೇಶಾದ್ಯಂತ ಹೆಚ್ಚುತ್ತಿರುವ ಕೊರೋನ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕದ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಗಾಝಿಯಾಬಾದ್ನ ಗುರುದ್ವಾರ ಪ್ರಬಂಧಕ್ ಸಮಿತಿ (ಜಿಜಿಪಿಸಿ) ಉಪಾಧ್ಯಕ್ಷ ಗುರುಪ್ರೀತ್ ಸಿಂಗ್ ‘ಆಮ್ಲಜನಕ ಲಾಂಗರ್’ (ಲಾಂಗರ್ ಎಂದರೆ ಗುರುದ್ವಾರದ ಸಮುದಾಯ ಅಡುಗೆಕೋಣೆ)ಅನ್ನು ಆರಂಭಿಸಿದ್ದಾರೆ. ‘‘ನಾವು ಗಾಝಿಯಾಬಾದ್ನ ಗುರುದ್ವಾರದ ಇಂದಿರಾಪುರಂನ ಆವರಣದಲ್ಲಿ ಆಮ್ಲಜನಕದ ಲಾಂಗರ್ ಆರಂಭಿಸಿದ್ದೇವೆ. ಕಳೆದ ಒಂದು ವಾರದಿಂದ ಪ್ರತಿದಿನ 70ರಿಂದ 90 ಜನ ಕೊರೋನ ಸೋಂಕಿತರಿಗೆ ಆಮ್ಲಜನಕ ನೀಡುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.

  ಕಳೆದ ವರ್ಷ ಮಾರ್ಚ್ನಲ್ಲಿ ಕಾಣಿಸಿಕೊಂಡ ಕೊರೋನ ಸಾಂಕ್ರಾಮಿಕ ರೋಗ ಹಾಗೂ ಅನಂತರ ಘೋಷಿಸಲಾದ ಲಾಕ್ಡೌನ್ ಸಂದರ್ಭ ಇಂದಿರಾಪುರಂ ಗುರುದ್ವಾರದ ಪೋಷಕರ ನೆರವಿನಿಂದ ‘ಖಾಲ್ಸಾ ಹೆಲ್ಪ್ ಇಂಟರ್ನ್ಯಾಷನಲ್ ಪೌಂಡೇಶನ್’ ಎಂದು ಕರೆಯಲಾಗುವ ಸರಕಾರೇತರ ಸಂಸ್ಥೆ (ಎನ್ಜಿಒ) ಸ್ಥಾಪಿಸಲಾಯಿತು ಹಾಗೂ ಅಗತ್ಯ ಇರುವವರಿಗೆ ನೆರವು ನೀಡಲು ಆರಂಭಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಲಾಕ್ಡೌನ್ ಸಂದರ್ಭ ನಾವು 1,000ದಿಂದ 1,500 ಜನರಿಗೆ ಪ್ರತಿ ದಿನ ಆಹಾರ ನೀಡಿದ್ದೇವೆ. ಈಗಿನ ಬಿಕ್ಕಟ್ಟು ಅರಿತುಕೊಂಡು ಆಮ್ಲಜನಕದ ಲಾಂಗರ್ ಅನ್ನು ಆರಂಭಿಸಿದ್ದೇವೆ ಎಂದು ಗುರುಪ್ರೀತ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News