×
Ad

ಎಲ್‍ಐಸಿ ದಕ್ಷಿಣ ಕೇಂದ್ರ ವಲಯದ ವಲಯ ಪ್ರಬಂಧಕರಾಗಿ ಎಂ ಜಗನ್ನಾಥ್ ಅಧಿಕಾರ ಸ್ವೀಕಾರ

Update: 2021-04-27 18:26 IST

ಬೆಂಗಳೂರು : ಭಾರತೀಯ ಜೀವವಿಮಾ ನಿಗಮದ (ಎಲ್‍ಐಸಿ) ದಕ್ಷಿಣ ಕೇಂದ್ರ ವಲಯ, ಹೈದರಾಬಾದ್ ಇದರ ವಲಯ ಪ್ರಬಂಧಕರಾಗಿ ಎಂ ಜಗನ್ನಾಥ್ ಅಧಿಕಾರ ಸ್ವೀಕರಿಸಿದ್ದಾರೆ. ನಿಗಮದ  ದಕ್ಷಿಣ ಕೇಂದ್ರ ವಲಯದ ವ್ಯಾಪ್ತಿಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಬರುತ್ತವೆ.

ವಾಣಿಜ್ಯ ಪದವೀಧರರಾಗಿರುವ ಜಗನ್ನಾಥ್ ಅವರು ಸಿಎ (ಇಂಟರ್) ಶಿಕ್ಷಣದ ಜತೆಗೆ ಮಾರ್ಕೆಟಿಂಗ್‍ನಲ್ಲಿ ಸ್ನಾತ್ತಕೋತ್ತರ ಡಿಪ್ಲೋಮಾ,  ಜೀವವಿಮೆ, ಸಾಮಾನ್ಯ ವಿಮೆ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಹೈದರಾಬಾದ್‍ನ ಇನ್‍ಸ್ಟಿಟ್ಯೂಟ್ ಆಫ್ ಇನ್ಶೂರೆನ್ಸ್ ಎಂಡ್ ರಿಸ್ಕ್ ಮ್ಯಾನೇಜ್ಮೆಂಟ್ ಇಲ್ಲಿಂದ ಅಂತರಾಷ್ಟ್ರೀಯ ಸ್ನಾತ್ತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಅವರು ಮುಂಬೈಯ ಇನ್ಶೂರೆನ್ಸ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯರೂ ಆಗಿದ್ದಾರೆ.

ವಲಯ ಪ್ರಬಂಧಕರಾಗಿ ಅಧಿಕಾರ ವಹಿಸುವ ಮುನ್ನ ಅವರು  ದಕ್ಷಿಣ ಕೇಂದ್ರ ವಲಯದ  ಕರ್ನಾಟಕ ಘಟಕದ ಪ್ರಾದೇಶಿಕ ಪ್ರಬಂಧಕರು (ಮಾರ್ಕೆಟಿಂಗ್) ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಪ್ರಾದೇಶಿಕ ಪ್ರಬಂಧಕ (ಮಾರ್ಕೆಟಿಂಗ್), ಹೈದರಾಬಾದ್ ಹಾಗೂ ಪ್ರಾದೇಶಿಕ ಪ್ರಬಂಧಕ (ಬ್ಯಾಂಕೆಶೂರೆನ್ಸ್), ಹೈದರಾಬಾದ್  ಆಗಿ  ಸೇವೆ ಸಲ್ಲಿಸಿದ್ದಾರೆ.  1988ರಲ್ಲಿ ಭಾರತೀಯ ಜೀವವಿಮಾ ನಿಗಮವನ್ನು ಡೈರೆಕ್ಟ್ ರೆಕ್ರೂಟ್ ಆಫೀಸರ್ ಆಗಿ ಸೇರಿದ್ದ ಜಗನ್ನಾಥ್ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ  ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿದೇಶದಲ್ಲಿ ಸೇವೆಗೂ ನಿಯುಕ್ತಿಗೊಂಡಿದ್ದ ಅವರು  ಎಲ್‍ಐಸಿ (ಲಂಕಾ) ಲಿಮಿಟೆಡ್, ಕೊಲಂಬೋ ಇದರ ಸಿಇಒ  ಹಾಗೂ ಎಂಡಿ ಆಗಿ 2009 ಹಾಗೂ 2013ರ ನಡುವೆ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News