3 ಅಸ್ಪತ್ರೆಗಳಲ್ಲಿ ಸಿಗದ ವೆಂಟಿಲೇಟರ್: ಅನಾರೋಗ್ಯ ಪೀಡಿದ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಮೃತ್ಯು; ಆರೋಪ
ದಾವಣಗೆರೆ, ಎ.27: ಅನಾರೋಗ್ಯ ಪೀಡಿದ ಮಹಿಳೆಯೊಬ್ಬರಿಗೆ ಸಕಾಲದಲ್ಲಿ ವೆಂಟಿಲೆಟರ್ ಸಿಗದೆ ಮೃತಪಟ್ಟಿರುವ ಘಟನೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಅಸ್ಪತ್ರೆಗೆ ಸಾಗಿಸಲಾಗಿತ್ತು. ಅದರೆ ಮೂರು ಅಸ್ಪತ್ರೆಗಳಲ್ಲಿ ಬೆಡ್ ಮತ್ತು ವೆಂಟಿಲೆಟರ್ ಇಲ್ಲದ ಕಾರಣದಿಂದಾಗಿ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪತ್ರಕರ್ತರೊಂದುಗೆ ಮೃತ ಮಹಿಳೆಯ ಮಗ ಮಾತನಾಡಿ, ನಮ್ಮ ತಾಯಿ ಚೆನ್ನಾಗಿ ಇದ್ದರು. ಅದರೆ, ಅಸ್ಪತ್ರೆಯವರು ತಾಯಿಯನ್ನು ಅಸ್ಪತ್ರೆಗೆ ಸೇರಿಸಿಕೊಳ್ಳದೆ ನಿರ್ಲಕ್ಷ್ಯ ತಾಳಿದ್ದರಿಂದ ಅವರು ಸಾವಿಗಿಡಾಗಿದ್ದಾರೆ. ಅಲ್ಲದೇ ತಾಯಿಗೆ ಊಟ ನೀಡದೆ ಸತಾಯಿಸಿದ್ದಾರೆ. 10 ಬಾರಿ ನಮ್ಮ ತಾಯಿ ಊಟ ಕೇಳಿದ್ದಾರೆ. ಅಸ್ಪತ್ರೆಯವರು ನೀಡಿಲ್ಲ ಎಂದು ಆರೋಪಿಸಿದರು.
ಜಿ.ಪಂ.ಸದಸ್ಯ ಬಸವಂತಪ್ಪ ಮಾತನಾಡಿ, ದಾವಣಗೆರೆ ತಾಲೂಕಿನ ಲೋಕಿಕೆರೆಯ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇಂತಹ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವ ಎಲ್ಲಾ ಸಂಭವವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಪತ್ರಿಕಾಗೋಷ್ಠಿ ಮುಖಾಂತರ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಕೋವಿಡ್ ನಿಂದ ಆಗುವಂತಹ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರೂ ಸಹ ಯಾವುದೇ ಮುಂಜಾಗ್ರತ ಕ್ರಮಗಳನ್ನು ಆರೋಗ್ಯ ಇಲಾಖೆ ಮಾಡಿಕೊಂಡಿಲ್ಲ ಎಂದು ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.