ಇನ್ನು 2-3 ದಿನಗಳಲ್ಲಿ ಆಕ್ಸಿಜನ್ ಸರಬರಾಜು ಆಗದಿದ್ದರೆ ಸಮಸ್ಯೆಯಾಗಲಿದೆ: ಮೈಸೂರು ಡಿಸಿ ರೋಹಿಣಿ ಸಿಂಧೂರಿ

Update: 2021-04-28 06:09 GMT

ಮೈಸೂರು,ಎ.27: ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ, ಇನ್ನೆರಡು ಮೂರು ದಿನಗಳಲ್ಲಿ ಆಕ್ಸಿಜನ್ ಸರಬರಾಜು ಆಗದಿದ್ದರೆ ಸಮಸ್ಯೆಯಾಗಲಿದೆ ಎಂದು ಜಿಲ್ಲಾದಿಕಾರಿ ರೋಹಿಣಿ ಸಿಂಧೂರಿ ಆತಂಕ ವ್ಯಕ್ತಪಡಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಬೆಡ್ ಮತ್ತು ಆಕ್ಸಿಜನ್ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ಆಕ್ಸಿಜನ್ ಸರಬರಾಜು ಆಗದಿದ್ದರೆ ಇನ್ನು ಎರಡು ಮೂರು ದಿನದಲ್ಲಿ ಸಮಸ್ಯೆಯಾಗಲಿದೆ. ಹೊಸ ಪ್ಲ್ಯಾಂಟ್ ಗೆ ಅನುಮತಿ ಸಿಕ್ಕಿದೆ. ಆದರೆ ಅದಕ್ಕೆ ಕನಿಷ್ಠ 25 ದಿನ ಬೇಕು. ನಮಗೆ ತುರ್ತಾಗಿ ಪರ್ಯಾವಾಗಿ ಆಕ್ಸಿಜನ್ ಬೇಕಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ವಾರಾಂತ್ಯದಲ್ಲಿ 50 ವೆಂಟಿಲೇಟರ್ ನೀಡುವ ಭರವಸೆ ಸರ್ಕಾರ ನೀಡಿದೆ ಎಂದರು.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇದ್ದು, ವಾರಾಂತ್ಯದಲ್ಲಿ ಮತ್ತಷ್ಟು ವೆಂಟಿಲೇಟರ್ ಬೆಡ್ ಗಳು ಸಿಗಲಿವೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು

ಮೈಸೂರಿನಲ್ಲಿ ಒಂದೇ ದಿನ 1500 ಪಾಸಿಟಿವ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ರೋಹಿಣಿ ಸಿಂಧೂರಿ, ಅದು ಹಳೆಯ ಅಂಕಿ ಅಂಶಗಳೆಲ್ಲಾ ಸೇರಿ ನೀಡಿದ ಒಟ್ಟು ಪಾಸಿಟಿವ್. ನಾವು 700 ರ ಆಸುಪಾಸಿನಲ್ಲಿ ಇದ್ದೇವೆ. ಅಂಕಿ ಅಂಶಗಳು ಎರಡು ದಿನದು ಸೇರಿದಾಗ ಈ ರೀತಿ ಹೆಚ್ಚಾದಂತೆ ಕಾಣುತ್ತದೆ. ಸಾವಿರ ದಾಟಿದೆ ಎಂದು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News