ಮನೆಯಲ್ಲೇ ಇರಿ, ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ಹೊರಗೆ ಬನ್ನಿ: ಸಿಎಂ ಯಡಿಯೂರಪ್ಪ ಮನವಿ
Update: 2021-04-28 18:18 IST
ಬೆಂಗಳೂರು, ಎ.28: ಆತ್ಮೀಯ ನಾಗರಿಕ ಬಂಧುಗಳೇ, ಕೊರೋನ ಹರಡುವಿಕೆ ನಿಯಂತ್ರಣಕ್ಕಾಗಿ 2 ವಾರಗಳ ಕಟ್ಟುನಿಟ್ಟಿನ ನಿರ್ಬಂಧ ಪ್ರಾರಂಭವಾಗಿದೆ. ಎಲ್ಲರಲ್ಲೂ ನನ್ನ ಕಳಕಳಿಯ ಮನವಿಯೆಂದರೆ, ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ, ಸರಕಾರದೊಂದಿಗೆ ಸಹಕರಿಸಿ, ಮನೆಯಲ್ಲೇ ಇರಿ, ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ಹೊರಗೆ ಬನ್ನಿ. ನಾವೆಲ್ಲರೂ ಒಂದಾಗಿ ಕೊರೋನ ಮಣಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.