×
Ad

ಬೇರೆಯವರ ಹೆಂಡತಿಯರ ಲೆಕ್ಕ ಹಾಕುವ ನೀವು ಕೊರೋನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ: ಸುಧಾಕರ್ ಗೆ ಕಾಂಗ್ರೆಸ್ ಚಾಟಿ

Update: 2021-04-30 12:00 IST

ಬೆಂಗಳೂರು, ಎ.30: ಸಚಿವ ಸುಧಾಕರ್ ಅವರೇ, ಬೇರೆಯವರ ಹೆಂಡತಿಯರ ಲೆಕ್ಕವನ್ನು ಚೆನ್ನಾಗಿ ಹಾಕುವ ನೀವು ಕೊರೋನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ!? ಎಂದು ರಾಜ್ಯ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ ಶವಗಳ ಸಾಲು, ಮಾಧ್ಯಮಗಳಲ್ಲಿ ಸಾವಿರ ಸಾವಿನ ಸುದ್ದಿಗಳು, ಆದರೆ ಸರ್ಕಾರ ವೈಫಲ್ಯ ಮುಚ್ಚಲು ಸಾವಿನ ಲೆಕ್ಕ ಮುಚ್ಚಿಡುತ್ತಿದೆ. ಮೋದಿಯ ಚಾಳಿ ಮುಂದುವರೆಸಿದೆ ಎಂದು ಟೀಕಿಸಿದೆ.

'ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ' ಇದೇ ಈ ಸರ್ಕಾರದ ಸಾಧನೆ. ಯಡಿಯೂರಪ್ಪಅವರೇ ಹಸಿವು ಕೊಲ್ಲುತ್ತಿದೆ ಕೂಡಲೇ ಅನ್ನಭಾಗ್ಯದ ಅಕ್ಕಿ 10 ಕೆಜಿಗೆ ಏರಿಸಿ, ಇಲ್ಲದೆ ಹೋದಲ್ಲಿ ಸೋಂಕಿತರ ಸಾವುಗಳೊಂದಿಗೆ ಹಸಿದವರ ಸಾವೂ ಸೇರಲಿದೆ, ನಿಮ್ಮ ಮಸಣಗಳು ಸಾಲುವುದಿಲ್ಲ. ಈ ಮನಕಲುಕುವ ಘಟನೆ ಕಂಡೂ ಸುಮ್ಮನಿದ್ದರೆ ಕ್ಷಮೆ ಇರುವುದಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News