×
Ad

ನಿವೃತ್ತ ಐಎಫ್‍ಎಸ್ ಅಧಿಕಾರಿ ಎಸ್‍ಜಿ ನೇಗಿನಾಳ ಇನ್ನಿಲ್ಲ

Update: 2021-05-02 23:12 IST

ಬೆಂಗಳೂರು, ಮೇ 2: ರಾಜಧಾನಿ ಬೆಂಗಳೂರು ಉದ್ಯಾನನಗರಿ ಎಂಬ ಬಿರುದಿಗೆ ಪ್ರಮುಖ ಕಾರಣೀಭೂತರಾದ ಖ್ಯಾತ ನಿವೃತ್ತ ಐಎಫ್‍ಎಸ್ ಅಧಿಕಾರಿ ಎಸ್.ಜಿ. ನೇಗಿನಾಳ(92) ರವಿವಾರ ನಿಧನರಾಗಿದ್ದಾರೆ.

ಯೂಥ್ ಫೋಟೊಗ್ರಫಿ ಸೊಸೈಟಿಯ ಗೌರವಾನ್ವಿತ ಸದಸ್ಯರಾಗಿ ನೇಗಿನಾಳ ಅವರು 1982ರಿಂದ 87ರ ಸೇವಾ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹಲವರ ಸಹಯೋಗದಲ್ಲಿ 15 ಲಕ್ಷ ಸಸಿಗಳನ್ನು ನೆಟ್ಟಿದ್ದರು.

ಈ ಕೆಲಸಕ್ಕೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು. ಇದೇ ಕಾರಣಕ್ಕೆ ಇಂದು ಬೆಂಗಳೂರು ಗಾರ್ಡನ್ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News