ಕೋವಿಡ್19: ಬೆಂಗಳೂರಿನಲ್ಲಿ 132 ಮಂದಿ ಸೇರಿ ರಾಜ್ಯದಲ್ಲಿಂದು 292 ಸೋಂಕಿತರು ಮೃತ್ಯು

Update: 2021-05-04 16:49 GMT

ಬೆಂಗಳೂರು, ಮೇ 4: ರಾಜ್ಯದಲ್ಲಿ ಮಂಗಳವಾರ 44,631 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 292 ಮಂದಿ ಸೋಂಕಿಗೆ ಬಲಿಯಾಗಿದ್ದು, 24,714 ಜನರು ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 16,90,934ಕ್ಕೆ ತಲುಪಿದೆ.

292 ಮಂದಿ ಸಾವು: ಬಾಗಲಕೋಟೆ 8, ಬಳ್ಳಾರಿ 27, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 132, ಬೀದರ್ 5, ಚಾಮರಾಜನಗರ 8, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 3, ಚಿತ್ರದುರ್ಗ 2, ದಕ್ಷಿಣಕನ್ನಡ 4, ಧಾರವಾಡ 4, ಗದಗ 3, ಹಾಸನ 5, ಹಾವೇರಿ 6, ಕಲಬುರಗಿ 4, ಕೊಡಗು 5,  ಮಂಡ್ಯ 6, ಮೈಸೂರು 10, ರಾಯಚೂರು 2, ರಾಮನಗರ 4, ಶಿವಮೊಗ್ಗ 15, ತುಮಕೂರು 14, ಉಡುಪಿ 2, ಉತ್ತರಕನ್ನಡ 8, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 2 ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಮಂಗಳವಾರ 44,631 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 676, ಬಳ್ಳಾರಿ 1280, ಬೆಳಗಾವಿ 615, ಬೆಂಗಳೂರು ಗ್ರಾಮಾಂತರ 996, ಬೆಂಗಳೂರು ನಗರ 20,870, ಬೀದರ್ 403, ಚಾಮರಾಜನಗರ 528, ಚಿಕ್ಕಬಳ್ಳಾಪುರ 639, ಚಿಕ್ಕಮಗಳೂರು 735, ಚಿತ್ರದುರ್ಗ 215, ದಕ್ಷಿಣ ಕನ್ನಡ 985, ದಾವಣಗೆರೆ 277, ಧಾರವಾಡ 647, ಗದಗ 191, ಹಾಸನ 2278, ಹಾವೇರಿ 408, ಕಲಬುರಗಿ 1,162, ಕೊಡಗು 743, ಕೋಲಾರ 600, ಕೊಪ್ಪಳ 585, ಮಂಡ್ಯ 1,506, ಮೈಸೂರು 2,293, ರಾಯಚೂರು 817, ರಾಮನಗರ 529, ಶಿವಮೊಗ್ಗ 803, ತುಮಕೂರು 1,636, ಉಡುಪಿ 556, ಉತ್ತರಕನ್ನಡ 822, ವಿಜಯಪುರ 379, ಯಾದಗಿರಿ ಜಿಲ್ಲೆಯಲ್ಲಿ 457 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 132 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 20,870 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 132 ಸೋಂಕಿತರು ಮೃತಪಟ್ಟಿದ್ದಾರೆ. 13,946 ಮಂದಿ ಗುಣಮುಖರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 8,40,274 ಕೊರೋನ ಸೋಂಕಿತರು ದೃಢಪಟ್ಟಿದ್ದು, 6,845ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿದಂತೆ ಒಟ್ಟು 3,01,712 ಪ್ರಕರಣಗಳಿದ್ದು, ಅವರೆಲ್ಲರೂ ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News