ಮಾಸ್ಕ್, ಸ್ಯಾನಿಟೈಸರ್ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ದೂರು ದಾಖಲಿಸಲು ಸಹಾಯವಾಣಿ

Update: 2021-05-04 17:06 GMT

ಬೆಂಗಳೂರು, ಮೇ 4: ರಾಜ್ಯ ಸರಕಾರದ ಆದೇಶದಂತೆ ಕಾನೂನು ಮಾಪನಶಾಸ್ತ್ರ ಇಲಾಖೆಯು ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಆಕ್ಸಿಮೀಟರ್ ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವವರ ವಿರುದ್ಧ ದೂರು ದಾಖಲಿಸಲು ಸಹಾಯವಾಣಿ ತೆರೆದಿದೆ.

ಇದಲ್ಲದೆ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಫಲಾನುಭವಿಗಳಿಗೆ ತೂಕದಲ್ಲಿ ಕಡಿಮೆ ನೀಡುತ್ತಿರುವವರ, ರೈತರಿಗೆ ಕೃಷಿ ಸಂಬಂಧಪಟ್ಟಂತೆ ಬಿತ್ತನೆಬೀಜ, ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರವನ್ನು ನಿಗಧಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವವರ ಹಾಗೂ ದಿನಸಿ ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ಪೊಟ್ಟಣ ಸಾಮಗ್ರಿ ರೂಪದಲ್ಲಿ ಮಾರಾಟ ಮಾಡುವ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಇಲಾಖೆಯ ನಿಯಂತ್ರಕರು, ಉಪನಿಯಂತ್ರಕರು, ಸಹಾಯಕ ನಿಯಂತ್ರಕರು ಹಾಗೂ ನಿರೀಕ್ಷಕರುಗಳಿಗೆ ದೂರು ನೀಡಬಹುದಾಗಿರುತ್ತದೆ.

ದೂರುಗಳನ್ನು, ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ. ದೂರವಾಣಿ ಸಂಖ್ಯೆ: 080-2225 3500 ಹಾಗೂ ಇ-ಮೇಲ್ ವಿಳಾಸ: clm-lm-ka@nic.in ಮತ್ತು ಇ-ಮಾಪನ್ ಹೆಲ್ಪ್‍ಡೆಸ್ಕ್, ಬೆಂಗಳೂರು, ಕಾನೂನು ಮಾಪನಶಾಸ್ತ್ರ ಇಲಾಖೆ ದೂರವಾಣಿ ಸಂಖ್ಯೆ: 080-2237 3500, ಅಥವಾ 83107 56754, 63622 07873 ಹಾಗೂ ಇ-ಮೇಲ್ ವಿಳಾಸ kar.lmdhelpdesk@gmail.com ಮೂಲಕ ನೀಡಬಹುದು ಎಂದು ಇಲಾಖೆಯ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News