ಗುಜರಿ ವಾಹನಗಳ ಪತ್ತೆಗೆ ಕ್ಯುಆರ್ ಕೋಡ್ ಅಳವಡಿಸಲು ಸಾರಿಗೆ ಇಲಾಖೆ ಯೋಜನೆ

Update: 2021-05-04 17:36 GMT

ಬೆಂಗಳೂರು, ಮೇ 4: ಕೇಂದ್ರ ಸರಕಾರದಿಂದ ಗುಜರಿ ನೀತಿ ಜಾರಿಯಾಗಿರುವ ಹಿನ್ನೆಲೆ ಕರ್ನಾಟಕ ವ್ಯಾಪ್ತಿಯಲ್ಲಿ ಗುಜರಿಗೆ ಸೇರಬೇಕಾದ ವಾಹನಗಳ ಪತ್ತೆಗೆ ಕ್ಯುಆರ್ ಕೋಡ್ ಅಳವಡಿಸಲು ಸಾರಿಗೆ ಇಲಾಖೆ ಯೋಜನೆವೊಂದನ್ನು ರೂಪಿಸಿದೆ.

ರಾಜ್ಯದೆಲ್ಲೆಡೆ 40 ಲಕ್ಷ ಗುಜರಿ ಸೇರಬೇಕಾದ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಇಂತಹ ವಾಹನಗಳ ಶೋಧಕ್ಕೆ ಸಾರಿಗೆ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ. ಇದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿ, ಪ್ರತ್ಯೇಕ ಕ್ಯೂಆರ್ ಕೋಡ್ ರೂಪಿಸಲಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News