ತಮ್ಮದೇ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಹೇಳುತ್ತಿರುವುದು ತೀರಾ ನಾಚಿಕೆಗೇಡು: ಕಾಂಗ್ರೆಸ್

Update: 2021-05-04 17:52 GMT

ಬೆಂಗಳೂರು, ಮೇ 4: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡುವ ದಂಧೆ ನಡೆಯುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಂಸದ ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ. ಎಂತಹ ನಾಟಕ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ. 

'ರಾಜ್ಯದಲ್ಲೂ ಕೇಂದ್ರದಲ್ಲೂ ಬಿಬಿಎಂಪಿಯಲ್ಲೂ ಬಹುತೇಕ ಬೆಂಗಳೂರು ಎಂಪಿಗಳೂ ಎಲ್ಲರೂ ಬಿಜೆಪಿಯವರೇ! ಒಬ್ಬರಲ್ಲ ಎಂದು ಮೂರು ಡಿಸಿಎಂಗಳು. ಅಧಿಕಾರವೆಲ್ಲ ತಮ್ಮ ಕೈಲಿದ್ದು ಸಹ ಬಿಜೆಪಿಯ ಎಂಪಿಗಳು, ಶಾಸಕರು ಪ್ರೆಸ್ ಮೀಟ್ ಮಾಡಿ ತಮ್ಮದೇ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ ಎಂದರೆ ಇದು ತೀರ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.

ಇಂದು ನಡೆದ ಸಂಸದ- ಶಾಸಕರ ಪತ್ರಿಕಾಗೋಷ್ಠಿ ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಯತ್ನ ಹಾಗೂ ಬಿಜೆಪಿ ಒಳಜಗಳದ ಭಾಗವಷ್ಟೇ. ಬೆಡ್‌ಗಳ ಅವ್ಯವಹಾರ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದೇಕೆ? ಪತ್ರಿಕಾಗೋಷ್ಠಿ ಬದಲು ಲೋಪ ಸರಿಪಡಿಸುವ ಪ್ರಯತ್ನ ಮಾಡಿಲ್ಲ ಏಕೆ? ಇಂತಹ ದುರಿತ ಕಾಲದಲ್ಲೂ ಗಂಭೀರ್ಯತೆ ಇಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News