×
Ad

ಚಾಮರಾಜನಗರ ದುರಂತ: ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು

Update: 2021-05-06 13:58 IST

ಚಾಮರಾಜನಗರ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ನೇತೃತ್ವದ ಐದು ತಂಡ ದಾಳಿ ನಡೆಸಿ, ಆಮ್ಲಜನಕ ಸಿಗದೇ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆ ಹಾಗೂ ಆಮ್ಲಜನಕ ಪೂರೈಕೆ ಸಂಬಂಧಿಸಿದ ಕಡತಗಳನ್ನು ವಶಪಡಿಸಿಕೊಂಡಿವೆ.

ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ,  ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ಡಿಸಿಆರ್‌ಬಿಯ ಅನ್ಸರ್ ಅಲಿ, ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ, ಚಾಮರಾಜನಗರ ಪಿಐ ನೇತೃತ್ವದ ತಂಡ, ನಗರದ ಡಿಎಚ್ಒ ಕಚೇರಿ, ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ, ಡೀನ್ ಕಚೇರಿ  ಜಿಲ್ಲಾಸ್ಪತ್ರೆಯಲ್ಲಿ ದಾಳಿ ನಡೆಸಿದೆ. 3 ತಾಸಿಗೂ ಹೆಚ್ಚು ಕಾಲ ಮಾಹಿತಿ ಕಲೆ ಹಾಕಿದ ತಂಡಗಳು, ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಸಂಪೂರ್ಣ ಲೆಕ್ಕಪತ್ರಗಳನ್ನು ವಶಕ್ಕೆ ಪಡೆದಿವೆ.

ದಾಳಿ ಬೆನ್ನಲ್ಲೇ ಡಿಎಚ್ಒ ಡಾ.ಎಂ.ಸಿ.ರವಿ ಪೊಲೀಸರ ಮುಂದೆಯೇ‌ ಕುಸಿದ ಬಿದ್ದ ಘಟನೆ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ನಡೆದಿದ್ದು ಅಲ್ಲೇ ಇದ್ದ ಸಹೋದ್ಯೋಗಿಗಳು ನೀರು ಕುಡಿಸಿ  ಆರೈಕೆ ಮಾಡಿದ್ದಾರೆ‌.‌ ರಾಜ್ಯ ಸರ್ಕಾರ ಆಮ್ಲಜನಕ ದುರಂತವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News