×
Ad

ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ: ತೇಜಸ್ವಿ ಸೂರ್ಯ, ಶಾಸಕ ಸತೀಶ್‌ ರೆಡ್ಡಿ ಬಂಧನಕ್ಕೆ ನೆಟ್ಟಿಗರ ಆಗ್ರಹ

Update: 2021-05-06 20:14 IST

ಬಿಬಿಎಂಪಿಯ ಬೆಡ್ ಹಂಚಿಕೆ ವ್ಯವಸ್ಥೆಯಲ್ಲಿ ಹಗರಣ ನಡೆಯುತ್ತಿದೆ ಎಂದು ಮಂಗಳವಾರ ಸಂಸದ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದರು. ಬೆಡ್ ಬ್ಲಾಕಿಂಗ್ ಹಗರಣ ನಡೆಯುತ್ತಿದೆ, ಇದರ ಹಿಂದೆ ಬಿಬಿಎಂಪಿಯವರೇ ಇದ್ದಾರೆ ಎಂದು ಆರೋಪಿಸಿದ್ದರು. ಆದರೆ ಆ ಬಳಿಕ ಪ್ರಕರಣಕ್ಕೆ ತಿರುವು ಲಭಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಶಾಸಕ ಸತೀಶ್‌ ರೆಡ್ಡಿ ಅವರ ಹೆಸರೇ ಹಗರಣದಲ್ಲಿ ಕೇಳಿ ಬಂದಿತ್ತು.

ಬೊಮ್ಮನಹಳ್ಳಿ ವಲಯದ ವಾರ್‌ ರೂಂನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಶಾಸಕ ಸತೀಶ್‌ ರೆಡ್ಡಿ ಹಾಗೂ ಅವರ ಬೆಂಬಲಿಗರು ಬೆದರಿಗೆ ಹಾಕಿ ಕೋವಿಡ್ ಸೋಂಕಿತರಿಗೆ ಹಾಸಿಗೆಗಳನ್ನು ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಶಾಸಕ ಸತೀಶ್‌ ರೆಡ್ಡಿ ಹಾಗೂ ಪ್ರಕರಣವನ್ನು ಕೋಮುವಾಧೀಕರಣ ಮಾಡಿದ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಂಧಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಹಾಗೂ ಸತೀಶ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿವೆ. #ArrestTejasviSurya, #ArrestSatishReddy, #TejasviSuryaExposed ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಸಾವಿರಾರು ಮಂದಿ ಟ್ವೀಟ್ ಮಾಡಿ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

''ಕೊರೋನ ಸಾವುಗಳು ಕೊಲೆಗಳು. ಈ ಭಯೋತ್ಪಾದಕರು ಮಾಡುತ್ತಿರುವ ವ್ಯವಸ್ಥಿತ ಕೊಲೆಗಳು. #ArrestSatishReddy #ArrestTejaswiSurya ಎಂದು ಪ್ರವೀಣ್ ರೆಡ್ಡಿ ಎಂಬವರು ಟ್ವೀಟ್ ಮಾಡಿದ್ದಾರೆ.

ತೇಜಸ್ವಿ ಸೂರ್ಯನೇ ಯಾಕೆ ದಂಧೆಯ ಕಿಂಗ್ ಪಿನ್ ಆಗಿರಬಾರದು??? ತೇಜಸ್ವಿ ಸೂರ್ಯರನ್ನು ಬಂಧಿಸಿ, ಸತೀಶ್ ರೆಡ್ಡಿಯನ್ನು ಬಂಧಿಸಿ ಎಂದು ವಿಜಯರಾಮ ಎಂಬವರು ಬರೆದಿದ್ದಾರೆ.

ತೇಜಸ್ವಿ ಸೂರ್ಯನೇ ಬೆಡ್ ಬ್ಲಾಕಿಂಗ್ ದಂಧೆಯ ಕಿಂಗ್ ಪಿನ್ ಇರಬಾರದೇಕೆ? ಹಂಚಿಕೆಯಲ್ಲಿ ಸಮಸ್ಯೆಯಾದ್ದರಿಂದ ಕೂಗಾಡಿದನೇ? ಸಿಸಿಬಿ‌/ತನಿಖಾ ಸಂಸ್ಥೆ ಸೂರ್ಯ ಅಂಡ್ ಗ್ಯಾಂಗ್‌ಅನ್ನು ಪ್ರಶ್ನಿಸುತ್ತದಾ? ಬಿಜೆಪಿಯು ಸತೀಶ್ ರೆಡ್ಡಿಯನ್ನು ಅಮಾನತ್ತಿನಲ್ಲಿಡುತ್ತದಾ, ಇಲ್ಲವಾ? ಎಂದು ವಸಂತ ಪೂಜಾರಿ ಎಂಬವರು ಕಿಡಿಕಾರಿದ್ದಾರೆ.

ಕಳೆದ ಬಾರಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಬಿಜೆಪಿ ಸರಕಾರ 2000 ಕೋಟಿ ಹಣ ಲೂಟಿ ಮಾಡಿತು. ಈ ಬಾರಿ ಹಾಸಿಗೆ ಹಗರಣ ಮಾಡುತ್ತಿದೆ. ಹೇಸಿಗೆ ತಿನ್ನುವುದೇ ಈ ಸರ್ಕಾರದ ಕೆಲಸವೇ? ಇಡೀ ದೇಶ ಒಟ್ಟಾಗಿ ಕೊರೋನ ವಿರುದ್ದ ಹೋರಾಡಬೇಕಾದ ತುರ್ತಿದೆ. ಇಂತಹ ಸಂಧರ್ಭದಲ್ಲಿ ಕೆಲ ದೇಶದ್ರೋಹಿಗಳು ಮತೀಯ ವಿಷ ಬಿತ್ತಿ ನಮ್ಮನ್ನು ದಿಕ್ಕುತಪ್ಪಿಸುತ್ತಿದ್ದಾರೆ, ಎಚ್ಚರವಹಿಸಿ ಎಂದು ಗಿರೀಶ್ ಹೆಚ್.ಕ್ಯಾದಿಗಿ ಎಂಬವರು ಮನವಿ ಮಾಡಿದ್ದಾರೆ.

ಬಿಬಿಎಂಪಿ ಬೆಡ್ ಹಗರಣ ಬೆಳಕಿಗೆ ಬರಲಿ. ತೇಜಸ್ವಿ ಸೂರ್ಯರನ್ನು ಬಂಧಿಸಿ, ಸತೀಶ್ ರೆಡ್ಡಿಯನ್ನು ಬಂಧಿಸಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಪ್ರಶಾಂತ್ ಗೌಡ ಎಂಬವರು ತಿಳಿಸಿದ್ದಾರೆ.

ಬೆಡ್ ಬ್ಲಾಕಿಂಗ್ - ಎಂದಿನಂತೆ ಶೂದ್ರ ಪಾಲುದಾರನನ್ನು ಸಿಲುಕಿಸಿ ತನ್ನನ್ನೇ ಸೇಫ್ ಮಾಡಿಕೊಂಡ ಕುಂಭಟ್ ಎಂದು ಜಯರಾಜ ನಂಜಪ್ಪ ಎಂಬವರು ಟ್ವೀಟ್ ಮಾಡಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆಯ ಕಿಂಗ್ ಪಿನ್ ಗಳಾದ ಸಂಸದ ತೇಜಸ್ವಿಸೂರ್ಯ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಚಿಕ್ಕಪೇಟೆ ಶಾಸಕ ಗರುಡಾಚಾರ್, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸಿ. ಕೋಮುವಾದಿಗಳು, ಬೆಡ್ ಬ್ಲಾಕಿಂಗ್ ದಂಧೆ ಕಿಂಗ್ ಪಿನ್ ಗಳು, ತಾನೇ ಕದ್ದು ಪರರ ಕಳ್ಳ ಎನ್ನುವ ಬಿಜೆಪಿ ರಾಜಕಾರಣಿಗಳನ್ನು ಬಡಿದು ಜೈಲಿಗಟ್ಟಿ ಎಂದು ಜಗದೀಶ ಎಂಬವರು ತಿಳಿಸಿದ್ದಾರೆ.

ಕೆಲವೊಮ್ಮೆ ಅತೀ ಬುದ್ಧಿವಂತಿಕೆ ತೋರಿಸಲು ಹೋಗಿ ತಾವೇ ದಡ್ಡರಾಗುತ್ತಾರೆ..! ಗೋಡೆಯಲ್ಲಿರೋದನ್ನ ತೆಗೆದು ಅದೆಲ್ಲಿಗೋ ಬಡಿದುಕೊಂಡರಂತೆ. ಉದಾಹರಣೆಗೆ: ತೇಜಸ್ವಿ ಸೂರ್ಯ ಎಂದು ಕಿರಣ್ ಎಂಬವರು ಬರೆದಿದ್ದಾರೆ.

80% ಬಿಬಿಎಂಪಿ ಬೆಡ್‌ಗಳನ್ನು ಸತೀಶ್ ರೆಡ್ಡಿ ಬ್ಲಾಕ್ ಮಾಡಿದ್ದರು. ತೇಜಸ್ವಿ ಸೂರ್ಯನ ಪಟಾಲಂ ಅದಕ್ಕೆ ಸಾಥ್ ಕೊಟ್ಟಿದ್ದರು. ವಾರ್ ರೂಮ್ ಸತೀಶ್ ರೆಡ್ಡಿಯ ಕಚೇರಿಯಿಂದಲೇ ಅಪರೇಟ್ ಆಗ್ತಿತ್ತು. ಕಮಿಷನರ್ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ತಮ್ಮ ಹೆಸರು ಬರಬಾರದೆಂದು ಆಡಿದ್ದು ಮಹಾನಾಟಕ. #ತೇಜಸ್ವಿ ಸೂರ್ಯರನ್ನು ಬಂಧಿಸಿ, ಸತೀಶ್ ರೆಡ್ಡಿಯನ್ನು ಬಂಧಿಸಿ ಎಂದು ಪವನ್ ನಾಯ್ಕ್ ಎಂಬವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News