ರಾಜ್ಯದಲ್ಲಿಂದು 49 ಸಾವಿರ ಹೊಸ ಕೊರೋನ ಪ್ರಕರಣಗಳು ದೃಢ: 328 ಮಂದಿ ಸಾವು

Update: 2021-05-06 17:02 GMT

ಬೆಂಗಳೂರು, ಮೇ 6: ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 49,058 ಹೊಸ ಪ್ರಕರಣಗಳು ದೃಢವಾಗಿದ್ದು, 328 ಮಂದಿ ಸಾವನ್ನಪ್ಪಿದ್ದಾರೆ. 18,943 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 17,212 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 5,17,075 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

328 ಮಂದಿ ಸಾವು: ಬಾಗಲಕೋಟೆ 7 ಬಳ್ಳಾರಿ 26, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 139, ಬೀದರ್ 4, ಚಾಮರಾಜನಗರ 5, ಚಿಕ್ಕಬಳ್ಳಾಪುರ 3, ದಕ್ಷಿಣ ಕನ್ನಡ 5, ದಾವಣಗೆರೆ 3, ಧಾರವಾಡ 6, ಗದಗ 2, ಹಾಸನ 9, ಹಾವೇರಿ 3, ಕಲಬುರಗಿ 14, ಕೊಡಗು 12, ಮಂಡ್ಯ 2, ಮೈಸೂರು 18, ರಾಯಚೂರು 3, ರಾಮನಗರ 9, ಶಿವಮೊಗ್ಗ 16, ತುಮಕೂರು 14, ಉಡುಪಿ 5, ಉತ್ತರ ಕನ್ನಡ 6, ವಿಜಯಪುರ 6 ಹಾಗೂ ಯಾದಗಿರಿ 2  ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಗುರುವಾರ 49,058 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 655, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು ನಗರ 23,706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1,191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1,403, ಹಾವೇರಿ 236, ಕಲಬುರಗಿ 1,652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1301, ಮೈಸೂರು 2531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2,418, ಉಡುಪಿ 1526, ಉತ್ತರ ಕನ್ನಡ 734, ವಿಜಯಪುರ 662, ಯಾದಗಿರಿ ಜಿಲ್ಲೆಯಲ್ಲಿ 721 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 139 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 23,706 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 139ಸೋಂಕಿತರು ಮೃತಪಟ್ಟಿದ್ದಾರೆ.

4,149ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಇಲ್ಲಿಯವರೆಗೆ 7145 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿದಂತೆ ಒಟ್ಟು 3,32,732 ಪ್ರಕರಣಗಳಿದ್ದು, ಅವರೆಲ್ಲರೂ ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News