ಕೋವಿಡ್ ಸೋಂಕಿಗೆ ಒಳಗಾಗಿರುವ ಕವಿ ಸಿದ್ದಲಿಂಗಯ್ಯ ಆರೋಗ್ಯದಲ್ಲಿ ಸುಧಾರಣೆ
Update: 2021-05-06 23:19 IST
ಬೆಂಗಳೂರು, ಮೇ 6: ಕೋವಿಡ್ ಸೋಂಕಿಗೆ ಒಳಗಾಗಿರುವ ಕವಿ ಸಿದ್ದಲಿಂಗಯ್ಯ ಆರೋಗ್ಯ ಸುಧಾರಣೆಯಲ್ಲಿದೆ ಎಂದು ಅವರ ಕುಟುಂಬ ವರ್ಗ ಮಾಹಿತಿ ನೀಡಿದೆ.
ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕವಿ ಸಿದ್ದಲಿಂಗಯ್ಯ ಆರೋಗ್ಯ ಸುಧಾರಿಸುತ್ತಿದ್ದು, ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಆದರೆ, ಕೆಲವು ಕಿಡಿಗೇಡಿಗಳು ಕೋವಿಡ್‍ನಿಂದ ಸಿದ್ದಲಿಂಗಯ್ಯ ಸಾವನ್ನಪ್ಪಿದ್ದಾರೆಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದ್ದರು. ಈ ಬಗ್ಗೆ ಯಾರೂ ಕಿವಿಗೊಡಬಾರದೆಂದು ಮನವಿ ಮಾಡಲಾಗಿದೆ.