ಮಕ್ಕಳಿಗಾಗಿ ಉಚಿತ ಟೆಲಿ ಕೌನ್ಸಿಲಿಂಗ್

Update: 2021-05-07 17:49 GMT

ಬೆಂಗಳೂರು, ಮೇ 7: ರಾಜ್ಯದಲ್ಲಿ ಕೋವಿಡ್-19ರ ಎರಡನೆ ಆಲೆಯ ಹಿನ್ನಲೆಯಲ್ಲಿ ಆಪ್ತ ಸಮಾಲೋಚನೆಗಾಗಿ ಅಗತ್ಯವಿರುವ ಎಲ್ಲ ಮಕ್ಕಳಿಗಾಗಿ “ಉಚಿತ ಟೆಲಿ- ಕೌನ್ಸಿಲಿಂಗ್’ ಸೌಲಭ್ಯವನ್ನು ನೀಡಲು ಟೋಲ್ ಫ್ರೀ ಸಂಖ್ಯೆ: 14499ನ್ನು ಸ್ಥಾಪಿಸಲಾಗಿದೆ.

ಆಪ್ತ ಸಮಾಲೋಚನೆ ಬಯಸುವ ರಾಜ್ಯದಲ್ಲಿನ ಎಲ್ಲ ಮಕ್ಕಳು ಹಾಗೂ ಮಕ್ಕಳಿಗಾಗಿ ಮಕ್ಕಳ ಪೋಷಕರು ಸಹ 14499 ಸಂಖ್ಯೆಗೆ ಕರೆ ಮಾಡುವ ಮೂಲಕ ಮಕ್ಕಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದಾಗಿದೆ.

ಅಲ್ಲದೇ ರಾಷ್ಟ್ರಾದ್ಯಂತ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಸೇವೆ: 1098 ಸಂಕಷ್ಟದಲ್ಲಿ ಸಿಲುಕಿರುವ/ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ.

ಈ ಪರಿಸ್ಥಿತಿಯಲ್ಲಿ ಸೂಕ್ತ ಹಾಗೂ ಸರಿಯಾದ ಸಲಹೆಗಳಿಗಾಗಿ ಮೇಲೆ ತಿಳಿಸಿರುವ ಸಂಖ್ಯೆಗಳಿಗೆ ಮಾತ್ರ ಕರೆ ಮಾಡುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News