ರಾಜ್ಯದಲ್ಲಿ ಜಿಲ್ಲಾವಾರು ಕೊರೋನ ಪ್ರಕರಣ ಹೆಚ್ಚಳ: 24 ಗಂಟೆಗಳಲ್ಲಿ 47,563 ಮಂದಿಗೆ ಪಾಸಿಟಿವ್

Update: 2021-05-08 17:15 GMT

ಬೆಂಗಳೂರು, ಮೇ 8: ರಾಜ್ಯದಲ್ಲಿ ಜಿಲ್ಲಾವಾರು ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದು, ಶನಿವಾರ 47,563 ಹೊಸ ಕೋವಿಡ್ ಪ್ರಕರಣಗಳು ದೃಢವಾಗಿದ್ದು, 482 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 34,881 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ 5,48,841ಸಕ್ರಿಯ ಪ್ರಕರಣಗಳಿವೆ.

482 ಮಂದಿ ಸಾವು: ಬಾಗಲಕೋಟೆ 3, ಬಳ್ಳಾರಿ 25, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 285, ಬೀದರ್ 6, ಚಾಮರಾಜನಗರ 2, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 3, ಚಿತ್ರದುರ್ಗ 1,  ದಕ್ಷಿಣಕನ್ನಡ 3 , ದಾವಣಗೆರೆ 1, ಧಾರವಾಡ 2, ಗದಗ 2, ಹಾಸನ 13, ಹಾವೇರಿ 10, ಕಲಬುರಗಿ 11, ಕೊಡಗು 4, ಕೋಲಾರ 5,  ಮಂಡ್ಯ 7, ಮೈಸೂರು 20, ರಾಯಚೂರು 4, ರಾಮನಗರ 7, ಶಿವಮೊಗ್ಗ 13, ತುಮಕೂರು 12, ಉಡುಪಿ 11, ಉತ್ತರಕನ್ನಡ 11,  ವಿಜಯಪುರ 3, ಹಾಗೂ ಯಾದಗಿರಿ 3  ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶನಿವಾರ 47,536 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 1563, ಬಳ್ಳಾರಿ 940, ಬೆಳಗಾವಿ 991, ಬೆಂಗಳೂರು ಗ್ರಾಮಾಂತರ 958, ಬೆಂಗಳೂರು ನಗರ 21,534, ಬೀದರ್ 311, ಚಾಮರಾಜನಗರ 691, ಚಿಕ್ಕಬಳ್ಳಾಪುರ 711, ಚಿಕ್ಕಮಗಳೂರು 356, ಚಿತ್ರದುರ್ಗ 166, ದಕ್ಷಿಣ ಕನ್ನಡ 1513, ದಾವಣಗೆರೆ 323, ಧಾರವಾಡ 965, ಗದಗ 341, ಹಾಸನ 996, ಹಾವೇರಿ 169, ಕಲಬುರಗಿ 1661, ಕೊಡಗು 765, ಕೋಲಾರ 903, ಕೊಪ್ಪಳ 600, ಮಂಡ್ಯ 1225, ಮೈಸೂರು 2294, ರಾಯಚೂರು 894, ರಾಮನಗರ 4071, ಶಿವಮೊಗ್ಗ 547, ತುಮಕೂರು 2419, ಉಡುಪಿ 1043, ಉತ್ತರಕನ್ನಡ 1034, ವಿಜಯಪುರ 525, ಯಾದಗಿರಿಜಿಲ್ಲೆಯಲ್ಲಿ 718 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News