ವಿಜಯಪುರ: 'ಬಿಎಲ್ ಡಿಇ' ಆಸ್ಪತ್ರೆಗೆ ರೆಮಿಡಿಸಿವರ್ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ಎಂ.ಬಿ ಪಾಟೀಲ್ ವಾಗ್ದಾಳಿ

Update: 2021-05-09 08:05 GMT
 ಎಂ.ಬಿ ಪಾಟೀಲ್ 

ವಿಜಯಪುರ: ತನ್ನ ಮಾಲಿಕತ್ವದ 500 ಕೋವಿಡ್  ಬೆಡ್ ಗಳ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಶೇಕಡ 70% ಕಡಿತಗೊಳಿಸಿ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಿ ಮಾನವೀಯತೆ ಮೆರೆದ ಮಾಜಿ ಗೃಹಸಚಿವ ಎಂ.ಬಿ ಪಾಟೀಲ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರಂತರವಾಗಿ ಮನವಿ ಸಲ್ಲಿಸಿದರೂ ಸರಿಯಾದ ಪ್ರಮಾಣದಲ್ಲಿ ರೆಮಿಡಿಸಿವರ್ ಔಷಧವನ್ನು ನೀಡದೇ, ಬೇಡಿಕೆಗೆ ಸರಿಯಾಗಿ ಸ್ಪಂದಿಸದೇ ಅಸಡ್ಡೆ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಆಸ್ಪತ್ರೆಯನ್ನೇ ಮುಚ್ಚಬೇಕಾದ ಪರಿಸ್ಥಿತಿಗೆ ತಲುಪಿಸುತ್ತೀರಾ ಎಂದು ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಸುಧಾರಕರ್ ರವರನ್ನು ಪ್ರಶ್ನಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಎಂ.ಬಿ ಪಾಟೀಲ್ ರವರ 'ಬಿಎಲ್ ಡಿಇ' ಆಸ್ಪತ್ರೆಯ ಸೇವೆಯನ್ನು ಕೊಂಡಾಡಿ 'ಇದು ವಿಜಯಪುರ ಜಿಲ್ಲೆಗೆ ಸಂಜೀವಿನಿಯಾಗುವ ಆಸ್ಪತ್ರೆ' ಎಂದಿದ್ದ ಆರೋಗ್ಯ ಸಚಿವ ಡಾ ಸುಧಾಕರ್, ಇದೀಗ ಆಸ್ಪತ್ರೆಯ ರೋಗಿಗಳಿಗೆ ಬೇಕಾದ ರೆಮಿಡಿಸಿವರ್ ಔಷದ ನೀಡುವ ಬೇಡಿಕೆಗೆ ಸ್ಪಂದಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News