#ನಮ್ಮೂರ_ಎಲ್ಲರೂ_ನಮ್ಮೋರು: ಕೋಮು ಸಾಮರಸ್ಯ ಸಾರಿದ ಟ್ವಿಟರಿಗರು

Update: 2021-05-09 13:07 GMT
photo: twitter

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ದೇಶದಾದ್ಯಂತ ದುರಂತಗಳು ಸಂಭವಿಸುತ್ತಿವೆ. ಹಲವಾರು ಮಂದಿ ಮೃತಪಡುತ್ತಿದ್ದಾರೆ, ಆಕ್ಸಿಜನ್‌ ಕೊರತೆ ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಧರ್ಮದ ಅನುಯಾಯಿಗಳು ತಮ್ಮಿಂದಾಗುವ ಸೇವೆ ಮಾಡುತ್ತಿದ್ದಾರೆ. ಈ ನಡುವೆ ಕೆಲ ವಿಕೃತರು ಈ ಸಾಂಕ್ರಾಮಿಕದ ನಡುವೆ ದ್ವೇಷ ಸಾರುತ್ತಿದ್ದು, ಅವರ ವಿರುದ್ಧ ಟ್ವಿಟರ್‌ ಬಳಕೆದಾರರು ʼನಮ್ಮೂರ ಎಲ್ಲರೂ ನಮ್ಮವರೇʼ ಹ್ಯಾಶ್‌ ಟ್ಯಾಗ್‌ ಅನ್ನು ಟ್ರೆಂಡಿಂಗ್‌ ಮಾಡಿದ್ದಾರೆ.

ನಮ್ಮ ಐತಿಹಾಸಿಕ ಖರಗವು ದೇವಸ್ಥಾನದಿಂದ ಸಾಗಿ ದರ್ಗಾಗಳನ್ನು ಹಾದು ಹೋಗುತ್ತದೆ. ನಮ್ಮ ನಗರದಲ್ಲಿ ಧಾರ್ಮಿಕ ಸಾಮರಸ್ಯವು ಹಲವು ಕಾಲದ ಇತಿಹಾಸ ಹೊಂದಿದೆ. ಒಂದು ಸಮುದಾಯವನ್ನು ಗುರಿಯಾಗಿಸುವವರಿಗೆ ನಮ್ಮೂರಿನಲ್ಲಿ ಜಾಗವಿಲ್ಲ." ಎಂದು ರಕ್ಷಿತ್‌ ಪೊನ್ನಾಥಪುರ ಎಂಬ ಬಳಕೆದಾರರು ಬರೆದಿದ್ದಾರೆ. 

"ನಮಗೆ ವ್ಯಾಕ್ಸಿನೇಶನ್‌ ನೀಡಿ, ಪೋಲರೈಝೇಶನ್‌ (ಭಿನ್ನತೆ) ಅಲ್ಲ. ನಮಗೆ ಆಕ್ಸಿಜನ್‌ ನೀಡಿ, ದ್ವೇಷವಲ್ಲ. ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬೆಂಗಳೂರಿಗರು ಒಗ್ಗಟ್ಟು ತೋರುತ್ತಿದ್ದಾರೆ. ತೇಜಸ್ವಿ ಸೂರ್ಯ ನಿಮಗೆ ಕೇಳಿಸುತ್ತಿದೆಯಾ? ಜನರನ್ನು ವಿಭಜಿಸುವ ಬದಲು ಕೆಲಸ ಮಾಡಲು ಪ್ರಾರಂಭಿಸಿ" ಎಂದು ಶ್ರೀವತ್ಸ ಟ್ವೀಟ್‌ ಮಾಡಿದ್ದಾರೆ.

"ಕರ್ನಾಟಕವು ಬಸವಣ್ಣರ ನಾಡಾಗಿದೆ. 12ನೇ ಶತಮಾನದಲ್ಲೇ ಮನುಷ್ಯರೆಲ್ಲರೂ ಒಂದೇ ಎಂಬುವುದನ್ನು ಅವರು ಸಾರಿದ್ದಾರೆ. ಇಂದು ಕೋಮುವಾದಿ ತೇಜಸ್ವಿ ಸೂರ್ಯನಂತವರು ನಮ್ಮನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ರಾಮಚಂದ್ರ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News