ಕೊರೋನ ತಡೆಗೆ ಮಡೆಸ್ನಾನ ಮಾಡಿ ಅಪಾರ ಪ್ರಮಾಣದ ಊಟ ಚೆಲ್ಲಿದ ಗ್ರಾಮಸ್ಥರು !

Update: 2021-05-11 16:45 GMT

ಬಳ್ಳಾರಿ, ಮೇ 11: ಕೋವಿಡ್ ನಿಯಂತ್ರಣ ಸಲುವಾಗಿ ಇಲ್ಲಿನ ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮಸ್ಥರು ಊರಿನ ಹೊರಭಾಗದಲ್ಲಿ ಆಹಾರವನ್ನು ಚೆಲ್ಲಿರುವ ಘಟನೆ ಬೆಳಕಿಗೆ ಬಂದಿದೆ.

ಈ ಗ್ರಾಮದಲ್ಲಿ ಗ್ರಾಮದಲ್ಲಿ 300ಕ್ಕೂ ಅಧಿಕ ಕೋವಿಡ್ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೂವತ್ತು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ, ಕೊರೋನ ನಿಯಂತ್ರಿಸಲು ಮಡೆಸ್ನಾನ ಮಾಡಿರುವ ಗ್ರಾಮಸ್ಥರು ಅಪಾರ ಪ್ರಮಾಣದ ಅನ್ನ, ಮೊಸರನ್ನ ತಯಾರಿಸಿಕೊಂಡು ಗ್ರಾಮದ ಹೊಲದ ಸುತ್ತಲೂ ಕೊಡಲಿ-ಬಡಿಗೆ, ಕಟ್ಟಿಗೆ, ಡೊಳ್ಳಿನ ವಾದ್ಯದೊಂದಿಗೆ ತೆರಳಿ, ಊಟವನ್ನು ಚೆಲ್ಲಿದ್ದಾರೆ.

ಈ ದೃಶ್ಯ ಗ್ರಾಮದ ಪ್ರಮುಖ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News