ಹೆಚ್ಚುತ್ತಲೇ ಇರುವ ಕೋವಿಡ್ ಸಾವು: ರಾಜ್ಯದಲ್ಲಿ ಒಂದೇ ದಿನ 517 ಸೋಂಕಿತರು ಮೃತ್ಯು

Update: 2021-05-12 16:47 GMT

ಬೆಂಗಳೂರು, ಮೇ 12: ರಾಜ್ಯದಲ್ಲಿ ಬುಧವಾರದಂದು 39,998 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 517 ಜನರು ಸೋಂಕಿಗೆ ಬಲಿಯಾಗಿದ್ದು, 34,752 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 20,53,191ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 20,368ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 5,92,182ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

517 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ 17, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 275, ಬೀದರ್ 7, ಚಾಮರಾಜನಗರ 8, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 2, ದಾವಣಗೆರೆ 1, ಧಾರವಾಡ 8, ಗದಗ 4, ಹಾಸನ 19, ಹಾವೇರಿ 10, ಕಲಬುರಗಿ 23. ಕೊಡಗು 10, ಕೋಲಾರ 2, ಕೊಪ್ಪಳ 12, ಮಂಡ್ಯ 10, ಮೈಸೂರು 9, ರಾಯಚೂರು 3, ರಾಮನಗರ 5, ಶಿವಮೊಗ್ಗ 26, ತುಮಕೂರು 14, ಉಡುಪಿ 6, ಉತ್ತರ ಕನ್ನಡ 8, ವಿಜಯಪುರ 8, ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 39,998 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 610, ಬಳ್ಳಾರಿ 1,823, ಬೆಳಗಾವಿ 856, ಬೆಂಗಳೂರು ಗ್ರಾಮಾಂತರ 1,138, ಬೆಂಗಳೂರು ನಗರ 16,286, ಬೀದರ್ 281, ಚಾಮರಾಜನಗರ 517, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 646, ಚಿತ್ರದುರ್ಗ 192, ದಕ್ಷಿಣ ಕನ್ನಡ 1,077, ದಾವಣಗೆರೆ 362, ಧಾರವಾಡ 904, ಗದಗ 347, ಹಾಸನ 1,572, ಹಾವೇರಿ 189, ಕಲಬುರಗಿ 646, ಕೊಡಗು 678, ಕೋಲಾರ 815, ಕೊಪ್ಪಳ 278, ಮಂಡ್ಯ 1,223, ಮೈಸೂರು 1,773, ರಾಯಚೂರು 289, ರಾಮನಗರ 135, ಶಿವಮೊಗ್ಗ 1,125, ತುಮಕೂರು 2,360, ಉಡುಪಿ 919, ಉತ್ತರ ಕನ್ನಡ 960, ವಿಜಯಪುರ 690, ಯಾದಗಿರಿ ಜಿಲ್ಲೆಯಲ್ಲಿ  753 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 275 ಜನರು ಸಾವು

ರಾಜಧಾನಿಯಲ್ಲಿ ಬುಧವಾರದಂದು 16,286 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 275 ಜನರು ಮೃತಪಟ್ಟಿದ್ದಾರೆ. 18,089 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 9,99,805  ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 8,964 ಜನರು ಸೋಂಕಿಗೆ ಬಲಿಯಾಗಿದ್ದಾರೆ. 6,30,221 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News