ಕೋವಿಶೀಲ್ಡ್ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರ 12-16 ವಾರಗಳಿಗೆ ವಿಸ್ತರಣೆ

Update: 2021-05-14 13:50 GMT

ಬೆಂಗಳೂರು, ಮೇ 14: ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನಂತರ 12 ವಾರಗಳನ್ನು ಪೂರ್ಣಗೊಳಿಸದ ನಾಗರಿಕರು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡದಂತೆ ರಾಷ್ಟ್ರೀಯ ರೋಗ ನಿರೋದಕ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯು, ರಾಷ್ಟ್ರೀಯ ತಜ್ಞರ ಸಮಿತಿ (ಎನ್‍ಇಜಿವಿಎಸಿ) ಶಿಫಾರಸಿನ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ನಂತರ 12 ರಿಂದ 16 ವಾರಗಳ ಅಂತರದಲ್ಲಿ ಅರ್ಹ ಫಲಾನುಭವಿಗಳಿಗೆ ಎರಡನೇ ಡೋಸ್ ನೀಡಲು ಸಲಹೆ ನೀಡಿರುತ್ತದೆ. 2 ಡೋಸ್‍ಗಳ ನಡುವಿನ ಕೋವಿಶೀಲ್ಡ್ ಲಸಿಕೆಗಾಗಿ 6 ರಿಂದ 8 ವಾರಗಳ ಹಿಂದಿನ ಮಧ್ಯಂತರವನ್ನು 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ.

2 ಬಾರಿ ಪಡೆಯುವ ಲಸಿಕೆಯ ನಡುವಿನ ಈ ಪರಿಷ್ಕೃತ ಸಮಯದ ಅಂತರ ಕೋವಿಶೀಲ್ಡ್ ಲಸಿಕೆಗೆ ಮಾತ್ರ ಅನ್ವಯಿಸುತ್ತದೆ. ಕೋವ್ಯಾಕ್ಸಿನ್ ಲಸಿಕೆಗೆ ಪಡೆಯುವ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಪರಿಷ್ಕರಣೆ ಮಾಡಿಲ್ಲವೆಂದು ಸಮಿತಿಯು ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News