ರಾಜ್ಯದಲ್ಲಿ 41 ಸಾವಿರ ಕೋವಿಡ್ ಪ್ರಕರಣಗಳು ದೃಢ: 349 ಮಂದಿ ಸೋಂಕಿಗೆ ಬಲಿ

Update: 2021-05-15 15:23 GMT

ಬೆಂಗಳೂರು, ಮೇ 15: ರಾಜ್ಯದಲ್ಲಿ ಶನಿವಾರ 41,664 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿದ್ದು, 349 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 34,425 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು 6,05,494 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

349 ಮಂದಿ ಸಾವು: ರಾಜ್ಯಾದ್ಯಂತ ಶನಿವಾರ 349 ಮಂದಿ ಸಾವನ್ನಪಿದ್ದಾರೆ. ಅದರಲ್ಲಿ ಬಾಗಲಕೋಟೆ 14, ಬಳ್ಳಾರಿ 28, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 94, ಬೀದರ್ 6, ಚಾಮರಾಜನಗರ 8, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 3, ಚಿತ್ರದುರ್ಗ 4, ದಕ್ಷಿಣಕನ್ನಡ 3, ದಾವಣಗೆರೆ 2, ಧಾರವಾಡ 8, ಗದಗ 4, ಹಾಸನ 11, ಹಾವೇರಿ 6, ಕಲಬುರಗಿ 21, ಕೊಡಗು 4, ಕೋಲಾರ 5, ಕೊಪ್ಪಳ 10, ಮಂಡ್ಯ 10, ಮೈಸೂರು 15, ರಾಯಚೂರು 4, ರಾಮನಗರ 6, ಶಿವಮೊಗ್ಗ 15, ತುಮಕೂರು 18, ಉಡುಪಿ 7, ಉತ್ತರಕನ್ನಡ 4, ವಿಜಯಪುರ 9 ಹಾಗೂ ಯಾದಗಿರಿಯಲ್ಲಿ 8 ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶನಿವಾರ 41,664 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 584, ಬಳ್ಳಾರಿ 1,622, ಬೆಳಗಾವಿ 1,502, ಬೆಂಗಳೂರು ಗ್ರಾಮಾಂತರ 1,265, ಬೆಂಗಳೂರು ನಗರ 13,402, ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1,093, ಚಿತ್ರದುರ್ಗ 454, ದಕ್ಷಿಣಕನ್ನಡ 1,787, ದಾವಣಗೆರೆ 292, ಧಾರವಾಡ 901, ಗದಗ 459, ಹಾಸನ 2,443, ಹಾವೇರಿ 267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1,188, ಮೈಸೂರು 2,489, ರಾಯಚೂರು 467, ರಾಮನಗರ 524, ಶಿವಮೊಗ್ಗ 1,081, ತುಮಕೂರು 2,302, ಉಡುಪಿ 1,146, ಉತ್ತರಕನ್ನಡ 1,226, ವಿಜಯಪುರ 789, ಯಾದಗಿರಿಜಿಲ್ಲೆಯಲ್ಲಿ 343 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 94 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 13,402ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 94 ಸೋಂಕಿತರು ಮೃತಪಟ್ಟಿದ್ದಾರೆ.

7,379 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 3,66,791 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರು ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News